
ನವದೆಹಲಿ: ಭಾರತದ ಯುವ ಗುರಿಕಾರ ಅನಂತಜೀತ್ ಮಾರುಕಾ ಅವರು ಫಿನ್ ಲ್ಯಾಂಡ್ ನ ಓರಿಮಲ್ಟಿಲಾದಲ್ಲಿ ನಡೆದ 7ನೇ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಬಾರತ ಒಟ್ಟು 4 ಪದಗಕಗಳೊಂದಿಗೆ ತವರಿಗೆ ಹಿಂತಿರುಗಲಿದೆ.
ಅನಂತ್ ಜೀತ್ ಗೆದ್ದ ಎರಡು ಪದಕಗಳ ಹೊರತಾಗಿಯೂ ಭಾರತ ತಂಡ ಒಂದು ಬೆಳ್ಳಿ ಮತ್ತು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಭರವಸೆಯ ಶೂಟರ್ ಅನಂತಜೀತ್, ಜೂನಿಯರ್ ಪುರುಷರ ಸ್ಕೀಟ್ ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಸಂಪಾದಿಸಿದರು. ಬಳಿಕ ಅವರು ತಂಡ ವಿಭಾಗದ ಸ್ಪರ್ಧೆಯಲ್ಲಿ ಅಂಗದ್ವೀರ್ ಬಾಜ್ವಾ ಮತ್ತು ಅರ್ಜುನ್ ಮನ್ ಅವರೊಂದಿಗೆ ಮತ್ತೊಂದು ಚಿನ್ನದ ಪದಕ ಜಯಿಸಿದರು. ಭಾರತಗ ಸ್ಪರ್ಧಿಗಳು ಕ್ರಮವಾಗಿ 110, 119 ಮತ್ತು 102 ಅಂಕಗಳನ್ನು ಕಲೆ ಹಾಕಿದರು. ಸ್ಕೀಟ್ ಜೂನಿಯರ್ ವಿಭಾಗದಲ್ಲಿ ಅಂಗದ್ವೀರ್ ಕಂಚಿನ ಪದಕ ಪಡೆದರು.
Advertisement