
ಸ್ಟಟ್ ಗರ್ಟ್: ಭಾರತದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ,ರೊಮೇನಿಯಾದ ಫ್ಲೊರಿನ್ ಮರ್ಜಿಯಾ, ಸ್ಟುಟ್ ಗರ್ಟ್ ಓಪನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹನ್-ಮರ್ಜಿಯಾ ಜೋಡಿ, 4ನೇ ಶ್ರೇಯಾಂಕಿತ ಜೋಡಿಯಾದ ಆಸ್ಟ್ರೇಲಿಯಾ-ಬ್ರೆಜಿಲ್ ನ ಜೋಡಿಯಾದ ಅಲೆಕ್ಸಾಂಡರ್ ಪೆಯಾ ಹಾಗೂ ಬ್ರುನೊ ಸೋರ್ಸ್ ಅವರನ್ನು 5-7,6-2 ಹಾಗೂ 10-7 ಸೆಟ್ ಗಳ ಅಂತರದಲ್ಲಿ ಪ್ರಶಸ್ತಿಗೆ ಭಾಜನವಾಯಿತಲ್ಲದೆ, ಸುಮಾರು 4 ಕೋಟಿ 15 ಲಕ್ಷ ಮೊತ್ತದ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಎರಡು ಜೋಡಿಗಳ ನಡುವಿನ ಮೊದಲ ಸೆಟ್ ನಲ್ಲಿ ಬೋಪಣ್ಣ-ಮರ್ಜಿಯಾ ಜೋಡಿ ಸೋಲು ಕಂಡಿತು. ಆದರೆ, ಎರಡನೇ ಸೆಟ್ ನಲ್ಲಿ ಪ್ರತಿರೋಧ ತೋರಿದ ಭಾರತ-ರೊಮೇನಿಯಾ ಜೋಡಿ , ತೀವ್ರ ಹೋರಾಟ ನೀಡಿತು. ಎದುರಾಳಿಗಳಿಗೆ ಒಂದೇ ಒಂದು ಬ್ರೇಕ್ ಪಾಯಿಂಟ್ ನ ಅವಕಾಶವನ್ನೂ ನೀಡದೆ ಆಡಿದ ಈ ಇಬ್ಬರು, ತಮಗೆ ಸಿಕ್ಕಿದ ಮೂರು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ಎರಡನ್ನು ಅಂಕಗಳನ್ನಾಗಿ ಪರಿವರ್ತಿಸಿ ಸೆಟ್ ಗೆಲ್ಲುವಲ್ಲಿ ಯಶಸ್ವಿಯಾದರು.
Advertisement