ಭಾರತ ವಿರುದ್ಧದ ಮೊದಲ ಟೆಸ್ಟ್ ನಂತರ ಟೆಸ್ಟ್ ಗೆ ಗುಡ್ ಬೈ ಹೇಳಲು ಸಂಗಕ್ಕಾರ ನಿರ್ಧಾರ

ಶ್ರೀಲಂಕಾದ ಹಿರಿಯ ಬ್ಯಾಟ್ಸ್ ಮನ್ ಕುಮಾರ ಸಂಗಕ್ಕಾರ ತವರಿನಲ್ಲಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ಸುದೀರ್ಘ ಮಾದರಿಯ ಕ್ರಿಕೆಟ್ ಗೆ ....
ಕುಮಾರ ಸಂಗಕ್ಕಾರ
ಕುಮಾರ ಸಂಗಕ್ಕಾರ

ಕೊಲಂಬೊ: ಶ್ರೀಲಂಕಾದ ಹಿರಿಯ ಬ್ಯಾಟ್ಸ್ ಮನ್ ಕುಮಾರ ಸಂಗಕ್ಕಾರ ತವರಿನಲ್ಲಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ಸುದೀರ್ಘ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳುವ ಸಾಧ್ಯತೆಗಳಿವೆ.
ಕುಮಾರ ಸಂಗಕ್ಕಾರ, ಶ್ರೀಲಂಕಾ ಕ್ರಿಕೆಟ್  ಮಂಡಳಿ ಜೊತೆ ತಮ್ಮ ಭವಿಷ್ಯದ ಕುರಿತು ಚರ್ಚೆ ನಡೆಸಿದ್ದು, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಆದರೆ, ಭಾರತ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸಾಧ್ಯತೆ ಇದೆ.

ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 18 ರಂದು ಗಾಲೆಯಲ್ಲಿ ಆರಂಭವಾಗಲಿದೆ. ಕುಮಾರ ಸಂಗಕ್ಕಾರ ಭಾರತದ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇತ್ತಾದರೂ, ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನ ಹಿನ್ನೆಲೆಯಲ್ಲಿ ಕೇವಲ ಮೊದಲ ಪಂದ್ಯವನ್ನಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ, ಮಾರ್ಚ್ ನಲ್ಲೇ ವಿಶ್ವಕಪ್ ಮುಕ್ತಾಯದ ನಂತರ ಸಂಗಕ್ಕಾರ ಎಲ್ಲ ಮಾದರಿಗೂ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ ಹಿರಿಯ ಆಯ್ಕೆ ಸಮಿತಿ ಸದಸ್.ರ  ಮಾತಿನಿಂದ ಮತ್ತೆರಡು  ಸರಣಿಗಳಲ್ಲಿ ಆಡಲು ಸಂಗಕ್ಕಾರ ಮನಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ 58.66ರ ಸರಾಸರಿಯಲ್ಲಿ ಸಂಗಕ್ಕಾರ 12, 203 ರನ್ ದಾಖಲಿಸಿದ್ದು, 83 ಶತಕ ದಾಖಲಿಸಿದ್ದಾರೆ. ಈ ಮೂಲಕ ಶ್ರೀಲಂಕಾದ ಅತ್ಯಂತ ಯಶಸ್ವಿ  ಟೆಸ್ಟ್ ಬ್ಯಾಟ್ಸ್  ಮನ್ ಆಗಿ  ಹೊರಹೊಮ್ಮಿದ್ದಾರೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com