
ಸ್ಟಾವೆಂಜರ್: ಮಾಜಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ನಾರ್ವೆ ಚೆಸ್ ಟೂರ್ನಿಯ ಪೂರ್ವಭಾವಿ ಸುತ್ತಿನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಪೂರ್ವಭಾವಿ ಸುತ್ತಿನಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ, ಟೂರ್ನಿಯ ಪ್ರಮುಖ ಸುತ್ತಿನ ಪಂದ್ಯಗಳಲ್ಲಿ ಯಾರ್ಯಾರು ಮುಖಾಮುಖಿಯಾಗಲಿದ್ದಾರೆಂಬುದು ನಿರ್ಧಾರವಾಗುತ್ತದೆ.
ಮಂಗಳವಾರದಿಂದ ಈ ಟೂರ್ನಿ ಮುಖ್ಯ ಪಂದ್ಯಗಳ ಸುತ್ತು ಆರಂಭವಾಗಿದೆ. ಇದಕ್ಕೂ ಮುನ್ನ ಸೋಮವಾರ ನಡೆದ ಪೂರ್ವಭಾವಿ ಸುತ್ತಿನಲ್ಲಿ ವಿಶ್ವನಾಥನ್ ಆನಂದ್ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರು.
ನಂತರ ಗೆಲುವಿನ ಅವಕಾಶ ಕೈ ಚೆಲ್ಲಿದರು. ಇನ್ನು ಅಂತಿಮ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಅವರ ವಿರುದ್ಧ ಸೋಲನುಭವಿಸಿದರು. ಈ ಮೂಲಕ 9 ಅಂಕಗಳ ಪೈಕಿ 5.5 ಅಂಕ ಸಂಪಾದಿಸಿದ ಆನಂದ್ 5ನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಆನಂದ್ ಅರ್ಧಕ್ಕಿಂತ ಹೆಚ್ಚು ಅಂಕ ಪಡೆದಿರುವ ಹಿನ್ನೆಲೆಯಲ್ಲಿ ಪ್ರಮುಖ ಸುತ್ತಿನಲ್ಲಿ ಒಟ್ಟು 5 ಬಿಳಿಕಾಯಿ ಪಂದ್ಯವನ್ನಾಡಲಿದ್ದಾರೆ. ಈ ಟೂರ್ನಿಯನ್ನು ಕ್ಲಾಸಿಕ್ ಮಾದರಿಯಲ್ಲಿ ಆಡಲಾಗುವುದು.
Advertisement