
ಆಟ್ವೆರ್ಪ್ (ಬೆಲ್ಜಿಯಂ) ವಿಶ್ವ ಹಾಕಿ ಲೀಗ್ ಟೂರ್ನಿಯ ಸೆಮಿಫೈನಲ್ ಸುತ್ತಿನ ಅಭ್ಯಾಸ ಪಂದ್ಯದಲ್ಲಿ ಭಾರತ ಪುರುಷರ ತಂಡ ಗೆಲುವಿನ ಹಾದಿ ಹಿಡಿದರೆ ವನಿತೆಯರ ಸೋಲನುಭವಿಸಿ ನಿರಾಸೆ ಮೂಡಿಸಿದೆ. ಬುಧವಾರ ನಡೆದ ಪುರುಷರ ಹಾಕಿ ತಂಡ ತನ್ನ ಮೂರನೇ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ವಿರುದ್ಧ ಭರ್ಜರಿ ಜಯ ದಾಖಲಿಸಿದರೆ, ವನಿತೆಯರ ತಂಡ ಇಟಲಿ ವಿರುದ್ಧ ಪರಭಾವಗೊಂಡಿದೆ.
ಪ್ರಸ್ತುತ ಉತ್ತಮ ಲಯದಲ್ಲಿರುವ ಪುರುಷರ ತಂಡ ಪ್ರಾಬಲ್ಯಯುತ ಪ್ರದರ್ಶನದ ಮೂಲಕ 4-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಪಂದ್ಯದಲ್ಲಿ ರೂಪಿಂದರ್ ಪಾಲ್ ಸಿಂಗ್ ಮೂರು ಗೋಲು ದಾಖಲಿಸುವ ಮೂಲಕ ತಂಡದ ಗೆಲುವನಿಲ್ಲಿ ಮಹತ್ವದ ಪಾತ್ರ ವಹಿಸಿದರು.
Advertisement