
ಹಾಲೆ (ಜರ್ಮನಿ): ಪುರುಷರ ಡಬಲ್ಸ್ ನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಜೋಡಿಯಾದ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ ರೊಮೇನಿಯಾದ ಫ್ಲೋರಿನ್ ಜೋಡಿ, ಗೆರ್ರಿ ವೆಬರ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಗುರುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಈ ಜೋಡಿ, ಕ್ರೋವೇಶಿಯಾದ ಮರೀನ್ ಡ್ರಗಂಜಾ ಹಾಗೂ ಹೆನ್ರಿ ಕಾಂಟಿನೆನ್ ಜೋಡಿಯನ್ನು 7-6 (4), 7-6 (4) ಸೆಟ್‍ಗಳ ಅಂತರದಲ್ಲಿ ಸೋಲಿಸಿ, ಉಪಾಂತ್ಯಕ್ಕೆ ಕಾಲಿಟ್ಟಿತು. ಇಡೀ ಪಂದ್ಯದಲ್ಲಿ ಎರಡು ಜೋಡಿಗಳು ತೋರಿದ ರಣೋತ್ಸಾಹ ಟೆನಿಸ್ ಅಭಿಮಾನಿಗಳಿಗೆ ಒಂದು ಸ್ವಾರಸ್ಯಕರ ಪಂದ್ಯದ ರಸದೌತಣವನ್ನು ಉಣಬಡಿಸಿತು. ಎಟಿಗೆ ಎದುರೇಟು ಎನ್ನುವಂತೆ ಎರಡು ಜೋಡಿಗಳು ನೀಡಿದ ಪ್ರದರ್ಶನ ಸಮಬಲದ ಹೋರಾಟಕ್ಕೆ ಸಾಕ್ಷಿಯಾದ ಎರಡು ಸೆಟ್ ಗಳು ಟೈ ಬ್ರೇಕರ್ ಗೆ ಬಂದು ನಿಂತಿದ್ದು ಪಂದ್ಯದ ವಿಶೇಷಗಳಲ್ಲೊಂದು. ಪಂದ್ಯದ ಆರಂಭದಿಂದಲೂ ವ್ಯಕ್ತವಾದ ಸಮಬಲದ ಹೋರಾಟ ದಿಂದಾಗಿ, ಮೊದಲ ಸೆಟ್ ಟೈಬ್ರೇಕರ್‍ಗೆ ಬಂದು ನಿಂತಾಗ, ಬೋಪಣ್ಣ ಹಾಗೂ ಮರ್ಜಿಯಾ ಜೋಡಿಯೇ ಗೆಲವು ಪಡೆಯಿತು. ಇದಾದ ನಂತರ, ಮರೀನ್ ಹಾಗೂ ಹೆನ್ರಿ ಜೋಡಿ ಪುನಃ ದ್ವಿತೀಯ ಸೆಟ್‍ನಲ್ಲಿ ಪುಟಿದೆದ್ದಿತು. ಅತ್ತ, ಬೋಪಣ್ಣ ಹಾಗೂ ಮರ್ಜಿಯಾ ಸಹ ಉತ್ತಮ ಪ್ರತಿರೋದ ತೋರಿದರು. ಇದರಿಂದಾಗಿ, ಈ ಸೆಟ್ ಸಹ ಟೈ ಬ್ರೇಕರ್ ಗೆ ಬಂದು ನಿಂತಿತು. ಆದರೆ ನಂತರ ಮುಂದುವರಿದ ಆಡದಲ್ಲಿ ಬೋಪಣ್ಣ ಹಾಗೂ ಮರ್ಜಿಯಾ ಜೋಡಿಯೇ ಗೆಲುವು ಸಾಧಿಸಿ ಗೆಲವು ಪಡೆಯುವ ಮೂಲಕ, ಪಂದ್ಯದಲ್ಲಿ ಜಯಶಾಲಿಯಾಗಿ ಹೊರಹೊಮ್ಮಿದರು.
ಫೆಡರರ್‍ಗೆ ಜಯ: ವಿಶ್ವದ ದ್ವಿತೀಯ ಶ್ರೇಯಾಂಕಿತ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು, ಗೆರ್ರಿ ವೆಬರ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈ ನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಅವರು, ಲ್ಯಾಟ್ವೇನಿಯಾದ ಎರ್ನೆಟ್ಸ್ ಗುಲ್ಬಿಸ್ ವಿರುದ್ಧ 6-3, 7-5 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು. ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಫೆಡರರ್, ಮೊದಲ ಸೆಟ್‍ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಆನಂತರ, ಎರಡನೇ ಸೆಟ್‍ನಲ್ಲೂ ವಿಜೃಂಭಿಸಿದ ಅವರು, ಅಲ್ಲೂ ಜಯ ಸಾಧಿಸುವ ಮೂಲಕ ಪಂದ್ಯದಲ್ಲಿ ಗೆಲವು ಪಡೆದರು. ಫೆಡರರ್ ಅವರು, ತಮ್ಮ ಮುಂದಿನ ಪಂದ್ಯದಲ್ಲಿ ಜರ್ಮನಿಯ ಫ್ಲಾರಿನ್ ಮೇಯರ್ ವಿರುದ್ಧ ಸೆಣಸಲಿದ್ದಾರೆ.
ಸಾನಿಯಾ ಜೋಡಿಗೆ ಆಘಾತ :ಭಾರತದ ನಂಬರ್‍ಒನ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಆಸ್ಟ್ರೇಲಿಯಾದ ಕ್ಯಾಸಿ ಡೆಲ್ಲಾಕ್ವಾ ಜೋಡಿ, ಏಗಾನ್ ಕ್ಲಾಸಿಕ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿ ಟೂರ್ನಿಯಿಂದ ಹೊರನಡೆದಿದೆ. ಗುರುವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ, ಚೈನೀಸ್ ತೈಪೇನ ಜೋಡಿಯಾದ ಜೀ ಝೆಂಗ್ ಹಾಗೂ ಯಂಗ್- ಜಾನ್ ಚಾನ್ ವಿರುದಟಛಿದ ಪಂದ್ಯದಲ್ಲಿ ಸಾನಿಯಾ-ಕ್ಯಾಸಿ ಜೋಡಿ, 6-4, 6-2 ಸೆಟ್‍ಗಳ ಅಂತರದಲ್ಲಿ ಸೋಲು ಕಂಡಿತು. ತಮ್ಮ ಹೊಸ ಜೊತೆಗಾತಿ ಮಾರ್ಟಿನಾ ಹಿಂಗಿಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಸಾನಿಯಾ
ಮಿರ್ಜಾ ಅವರು ಮೊದಲ ಸುತ್ತಿನಲ್ಲಿ ಸೋಲು ಅನುಭವಿದಾಗ ಆತ್ಮವಿಶ್ವಾ ಕಳೆದುಕೊಂಡವರಂತೆ ಕಂಡರು. ಇದರ ಪರಿಣಾಮ ಆಟದ ಮೇಲೂ ಆಯಿತು. ಅತ್ತ, ಅವರ ಈ ಪಂದ್ಯದಲ್ಲಿನ ಜೊತೆಗಾತಿ ಕ್ಯಾಸಿ ಅವರಿಂದಲೂ ಮೊನಚು ಆಟ ಹೊರಹೊಮ್ಮಲಿಲ್ಲ. ಹಾಗಾಗಿ, ಎರಡೂ ನೇರ ಸೆಟ್‍ಗಳಲ್ಲಿ ಸಾನಿಯಾ ಜೋಡಿ ಸೋಲು ಅನುಭವಿಸಬೇಕಾಯಿತು. ಇದೇ ವರ್ಷ ಜೊತೆಯಾಗಿರುವ ಸಾನಿಯಾ ಹಾಗೂ ಸ್ವಿಜರ್ಲೆಂಡ್‍ನ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರು, ಈ ಟೂರ್ನಿಯಲ್ಲಿ ಜೊತೆಗಿಳಿದಿರಲಿಲ್ಲ. ಕಾರಣಾಂತರಗಳಿಂದ ಮಾರ್ಟಿನಾ ಅವರಿಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ. ಹಾಗಾಗಿ, ಸಾನಿಯಾ ಅವರು ಕ್ಯಾಸಿ ಜೊತೆಗೂಡಿ ಕಣಕ್ಕಿಳಿಯಬೇಕಾಗಿತ್ತು. ಮುಂದಿನ ಟೂರ್ನಿಯಲ್ಲಿ ಮಾರ್ಟಿನಾ ಅವರು ಸಾನಿಯಾ ಅವರನ್ನು ಮತ್ತೆ ಜೊತೆಗೂಡುತ್ತಾರೆ ಎಂದು ಹೇಳಿದೆ.
Advertisement