ಅತ್ರಿ- ರೆಡ್ಡಿ ಜೋಡಿ ಪ್ರಶಸ್ತಿ ಸುತ್ತಿಗೆ

ಯುಎಸ್ ಓಪನ್ ಗ್ರ್ಯಾನ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪಂದ್ಯಗಳಲ್ಲಿ ಭಾರತಕ್ಕೆ ಒಂದು ಸಿಹಿ ಹಾಗೂ ಎರಡು ಕಹಿ ಅನುಭವವಾಗಿದೆ.
ಮನು ಅತ್ರಿ- ಸುಮಿತ್ ರೆಡ್ಡಿ
ಮನು ಅತ್ರಿ- ಸುಮಿತ್ ರೆಡ್ಡಿ

ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪಂದ್ಯಗಳಲ್ಲಿ ಭಾರತಕ್ಕೆ ಒಂದು ಸಿಹಿ ಹಾಗೂ ಎರಡು ಕಹಿ ಅನುಭವವಾಗಿದೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ ಹಾಗೂ ಸುಮಿತ್ ರೆಡ್ಡಿ ಜೋಡಿ ಉಪಾಂತ್ಯಂದಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದ್ದರೆ, ಮಹಿಳೆಯರ ಡಬಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಪರಾಭವಗೊಂದಿದೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಉಪಾಂತ್ಯ ಸುತ್ತನ್ನು ತಲುಪಿದ್ದ ಸಾಯಿ ಪ್ರಣೀತ್ ಸಹ ಸೋಲು ಕಂಡು ಟೂರ್ನಿಯಿಂದ ಹೊರನಡೆದಿದ್ದಾರೆ.

ಮನು-ರೆಡ್ಡಿ ವಿಜಯ: ಪುರುಷರ ಡಬಲ್ಸ್ ನ ಉಪಾಂತ್ಯದ ಪಂದ್ಯದಲ್ಲಿ ಟೂರ್ನಿಯ 26 ನೇ ಶ್ರೇಯಾಂಕಿತ ಅತ್ರಿ ಹಾಗೂ ರೆಡ್ಡಿ ಜೋಡಿ, ಜಪಾನ್ ನ ಟಕೇಶಿ ಕಮುರಾ ಹಾಗೂ ಕೀಗೋ ಸೊನೋಡಾ ವಿರುದ್ಧ 21 -17 , 21 -17 ಗೇಮ್ ಗಳ ಅಂತರದಲ್ಲಿ ಪರಾಭವಗೊಳಿಸಿದರು. ಪಂದ್ಯದ ಆರಂಭದಿಂದಲೂ ಆಟದಲ್ಲಿ ಉತ್ತಮ ಲಯ ಪ್ರದರ್ಶಿಸಿದ ಭಾರತದ ಯುವಕರು, ಎದುರಾಳಿಗಳ ಮೇಲೆ ಬೇಗನೇ ಹತೋಟಿ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ ಇದರಿಂದ ಜಪಾನ್ ಆಟಗಾರರು ಹತಾಶರಾಗಲಿಲ್ಲ. ಅವರೂ ತೀವ್ರ ಪ್ರತಿಸ್ಪರ್ಧೆ ನೀಡಿದರು.

ಆದರೆ ಅತ್ಯುತ್ತಮ ಸಂಘಟಿತ ಹಾಗೂ ಚುರುಕಿನ ಹೋರಾಟ ಸಾಧಿಸಿದ ಭಾರತೀಯರು, ಈ ಗೇಮ್ ನಲ್ಲಿ 21 -17 ರ ಅಂತರದಲ್ಲಿ ಗೆಲುವು ಪಡೆಯುವಲ್ಲಿ ಸಫಲರಾದರು. ಎರಡನೇ ಗೇಮ್ ನಲ್ಲೂ ಇದೇ ರೀತಿಯ ಪೈಪೋಟಿ ಮುಂದುವರೆಯಿತು. ಗೆಲುವಿಗಾಗಿ ಜಪಾನಿ ಜೋಡಿ ಅನುಸರಿಸಿದ ಎಲ್ಲಾ ತಂತ್ರಗಳೂಭಾರತೀಯರ ಎದುರು ವಿಫಲವಾದವು. ಮೊದಲು ಗೇಮ್ ಸೋತ ನಂತರ, ಕೊಂಚ ಆತ್ಮವಿಶ್ವಾಸ ಕಳೆದುಕೊಂಡಿದ್ದ ಜಪಾನಿಯರಿಗೆ, ಎರಡನೇ ಗೇಮ್ ನಲ್ಲಿ ತಮ್ಮ ಯಾವ ತಂತ್ರಗಳೂ ಫಲಿಸದೇ ಇದ್ದಿದ್ದು ಮತ್ತಷ್ಟು ನಿರಾಸೆ ತಂದಿತು. 21 -17  ಅಂತರದಲ್ಲಿ ಜಯ ಸಾಧಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com