ಐಸಿಸಿ ಸಭೆಗೆ ಶ್ರೀನಿವಾಸನ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರೂ, ಎನ್.ಶ್ರೀನಿವಾಸನ್ ಐಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಯಾಗಿ...
ಎನ್.ಶ್ರೀನಿವಾಸನ್
ಎನ್.ಶ್ರೀನಿವಾಸನ್

ದುಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರೂ, ಎನ್.ಶ್ರೀನಿವಾಸನ್ ಐಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಯಾಗಿ ಭಾಗವಹಿಸಲು ಸಜ್ಜಾಗಿದ್ದಾರೆ.
ಜೂನ್ 24ರಿಂದ 26ರವರೆಗೆ ಬಾರ್ಬಡಾಸ್‍ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಐಸಿಸಿ ಮುಖ್ಯಸ್ಥ ಎನ್ .ಶ್ರೀನಿವಾಸನ್ ಅವರನ್ನು ಬಿಸಿಸಿಐ ಪ್ರತಿನಿಧಿ ಎಂದು ಹೇಳಲಾಗಿದೆ. ಐಸಿಸಿಯ ಮುಖ್ಯಸ್ಥರಾಗಿ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಐಸಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಐಸಿಸಿಯ ಸಭೆಯಲ್ಲಿ 10 ಪೂರ್ಣ ಪ್ರಮಾಣದ ಸದಸ್ಯರು ಮತ್ತು ಮೂವರು ಚುನಾಯಿತ ಸಹ ಸದಸ್ಯರು ಸೇರಿದಂತೆ ಎಲ್ಲರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಸಂಸ್ಥೆಯಿಂದ ಮುಖ್ಯಸ್ಥರು ಅಥವಾ ಅಧ್ಯಕ್ಷರು ಭಾಗವಹಿಸಬೇಕಾಗುತ್ತದೆ. ಸೋಮವಾರ ಐಸಿಸಿ ವಾರ್ಷಿಕ
ಸಭೆ ಆರಂಭವಾಗಲಿದ್ದು, ಇದರ ಜತೆಗೆ ಸಹ ಸದಸ್ಯರ ಮತ್ತು ಐಸಿಸಿ ಮಾನ್ಯತೆ ಪಡೆದಿರುವ ಸದಸ್ಯರ ಸಭೆ ನಡೆಯಲಿದೆ. ಈ ಸಭೆ ನಡೆದ ನಂತರ ಎರಡು ದಿನಗಳ ಕಾಲ ಐಸಿಸಿ ಮಂಡಳಿ ಸಭೆ ನಡೆಯಲಿದೆ. ಕಳೆದ ಮಾರ್ಚ್‍ನಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಜಗಮೋಹನ್ ದಾಲ್ಮಿಯಾ ಅವರು ಆಯ್ಕೆಯಾಗಿದ್ದರೂ, ಐಸಿಸಿ ಸಭೆಯಲ್ಲಿ ಬಿಸಿಸಿಐ ಪರವಾಗಿ ಯಾಕೆ ಅವರು ಭಾಗವಹಿಸುತ್ತಿಲ್ಲ ಎಂಬ ಕಾರಣ ತಿಳಿದು ಬಂದಿಲ್ಲ. ಈ ವಾರ್ಷಿಕ ಸಭೆಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಈ ಸಭೆಯಲ್ಲಿ 50ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಲಿದ್ದು, ಇದೇ ಮೊದಲ ಬಾರಿಗೆ ಈ ಸಭೆ ವೆಸ್ಟ್ ಇಂಡೀಸ್‍ನಲ್ಲಿ ನಡೆಯಲಿದೆ. ಮುಂದಿನ ಒಂದು ವಾರಗಳ ಕಾಲಾವಧಿಯಲ್ಲಿ ಐಸಿಸಿಯ ವಿವಿಧ ಸಭೆಗಳು ನಿರಂತರವಾಗಿ ನಡೆಯಲಿದ್ದು, ಈ ಸಭೆಗಳಲ್ಲಿ ವಿವಿಧ ಸಂಸ್ಥೆಗಳಿಗೆ ಸಂಬಂಧಿಸಿದ ಮನವಿಗಳು, ನೂತನ ಐಸಿಸಿ ಅಧ್ಯಕ್ಷರ ಆಯ್ಕೆ, ಐಸಿಸಿ ಸದಸ್ಯತ್ವಕ್ಕಾಗಿ ಸರ್ಬಿಯಾದ ಅರ್ಜಿ, ಶ್ರೀಲಂಕಾ ಕ್ರಿಕೆಟ್ ಮತ್ತು ಅಮೆರಿಕ ಕ್ರಿಕೆಟ್ ಸಂಸ್ಥೆಗಳ ಸ್ಥಾನಮಾನ ಏರಿಕೆ, ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ದಳದ ಅಧ್ಯಕ್ಷರ ವರದಿ, ಇತ್ತೀಚೆಗೆ ನಡೆದ ಐಸಿಸಿ ಸಭೆಗಳಲ್ಲಿ ಕ್ರಿಕೆಟ್ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಶಿಫಾರಸ್ಸುಗಳ ಕುರಿತು ಚರ್ಚೆ ನಡೆಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com