
ಬ್ಯಾಂಕಾಂಕ್: ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು, ಏಷ್ಯನ್ ಗ್ರ್ಯಾನ್ ಫ್ರೀ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಹಿಳೆಯರ 400 ಮೀ, ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪೂವಮ್ಮ, 53.51 ಸೆಕೆಂಡ್‌ಗಳಲ್ಲಿ ಗುರು ಮುಟ್ಟಿ ಕಂಚಿನ ಪದಕ ಪಡೆದಿದ್ದಾರೆ.
ಪೂವಮ್ಮ ಗಳಿಸಿದ ಪದಕವೂ ಸೇರಿದಂತೆ ಸೋಮವಾರ ಆರಂಭಗೊಂಡ ಏನ್ಯನ್ ಗ್ರ್ಯಾನ್ ಫ್ರೀ ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಐದು ಕಂಚಿನ ಪದಕ ಲಭ್ಯವಾಗಿವೆ.
800 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉದಯೋನ್ಮುಖ ಓಟಗಾರ ಜಿನ್ಸನ್ ಜಾನ್ಸನ್ ಅವರು, 48.59 ಸೆಕೆಂಡ್‌ಗಳಲ್ಲಿ ಗುರು ಮುಟ್ಟಿ ಚಿನ್ನದ ಗೌರವಕ್ಕೆ ಪಾತ್ರರಾಗಿದ್ದಾರೆ.
ಶಾಟ್‌ಪುಟ್‌ನಲ್ಲಿ ಏಷ್ಯಾದ ಚಾಂಪಿಯನ್ ಆಗಿರುವ ಇಂದರ್‌ಜೀತ್ ಸಿಂಗ್ ಅವರೂ 19.83 ಮೀಟರ್‌ಗಳವರೆಗೆ ಗುಂಡನ್ನು ಎಸೆದು ಚಿನ್ನದ ಗೌರವ ಪಡೆದರು.
ಲಾಂಗ್ ಜಂಪ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಂಕಿತ್ ಶ್ರಮಾ ಅವರು, 2.78 ಮೀಟರ್‌ಗಳವರೆಗೆ ಜಿಗಿದು ಬೆಳ್ಳಿ ಪದಕಕ್ಕೆ ಪಾತ್ರರಾದರೆ, 400 ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 2014ರ ಏಷ್ಯನ್ ಗೇಮ್ಸ್ ಕಂಚು ವಿಜೇತ ಆರೋಕ್ಯ ರಾಜೀವ್ 46.86 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಪಡೆದರು.
Advertisement