ಮತ್ತೆ ಶಂಕಾಸ್ಪದ ಬೌಲಿಂಗ್ ಸುಳಿಯಲ್ಲಿ ಪಾಕ್ ಆಟಗಾರ ಮೊಹಮದ್ ಹಫೀಜ್

ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ ಮೊಹಮದ್ ಹಫೀಜ್ ಅವರ ಬೌಲಿಂಗ್ ಶೈಲಿ ಕಾನೂನು ಬಾಹಿರವಾಗಿದೆ
ಪಾಕ್ ಕ್ರಿಕೆಟಿಗ ಮೊಹಮದ್ ಹಫೀಜ್( ಸಂಗ್ರಹ ಚಿತ್ರ)
ಪಾಕ್ ಕ್ರಿಕೆಟಿಗ ಮೊಹಮದ್ ಹಫೀಜ್( ಸಂಗ್ರಹ ಚಿತ್ರ)

ಗಾಲೆ: ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ ಮೊಹಮದ್ ಹಫೀಜ್ ಅವರ ಬೌಲಿಂಗ್ ಶೈಲಿ ಕಾನೂನು ಬಾಹಿರವಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿರುವುದಾಗಿ ಖಾಸಗಿ ಅಂತರ್ಜಾಲ ಮಾಧ್ಯಮ ವರದಿ ಮಾಡಿದೆ.

ಶ್ರೀಲಂಕಾ ವಿರುದ್ಧ ಗಳೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 10  ವಿಕೆಟ್ ಗಳ ಗೆಲುವು ದಾಖಲಿಸಿತ್ತು. ಈ ಪಂದ್ಯದ ವೇಳೆ ಹಫೀಜ್ ಅನುಮಾನಾಸ್ಪದ ಶೈಲಿಯಲ್ಲಿ ಬೌಲಿಂಗ್ ಮಾಡಿರುವುದಾಗಿ ಪಂದ್ಯದ ಅಧಿಕಾರಿಗಳು ವರದಿ ನೀಡಿದ್ದಾರೆಂದು ಅಂತರ್ಜಾಲ ಮಾಧ್ಯಮ ತಿಳಿಸಿದೆ.

ಕಾನೂನು ಬಾಹಿರ ಬೌಲಿಂಗ್ ನಿಂದ 2014 ರ ನವೆಂಬರ್ ನಲ್ಲಿ ಹಫೀಜ್ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗಿತ್ತು. ನಂತರ 2015 ರ ಏಪ್ರಿಲ್ ತಿಂಗಳಲ್ಲಿ ಮತ್ತೆ ಬೌಲಿಂಗ್ ಮಾಡಲು ಅನುಮತಿ ನೀಡಲಾಗಿತ್ತು. ಹಫೀಜ್ ಮುಂದಿನ 14 ದಿನಗಳ ಒಳಗಾಗಿ ಬೌಲಿಂಗ್ ಶೈಲಿ ಪರೀಕ್ಷೆಗೆ ಒಳಗಾಗಬೇಕಿದ್ದು ಪರೀಕ್ಷೆಯ ಫಲಿತಾಂಶದವರೆಗೂ ಅವರು ಬೌಲಿಂಗ್ ಮಾಡಲು ಅವಕಾಶ ನೀಡಲಾಗುವುದು.
ಐಸಿಸಿ ನಿಯಮದ ಪ್ರಕಾರ ಬೌಲರ್ 2 ವರ್ಷದ ಕಾಲಾವಧಿಯಲ್ಲಿ ಎರಡು ಬಾರಿ ಅನುಮಾನಾಸ್ಪದ ಬೌಲಿಂಗ್ ಕಂಡುಬಂದರೆ ಆತ 12 ತಿಂಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗುವುದು ಎಂದು ಐಸಿಸಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com