
ನವದೆಹಲಿ: ಮುಂದಿನ ವರ್ಷ ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಒಲಂಪಿಕ್ಸ್ ಕೂಟಕ್ಕೆ ದೈಹಿಕವಾಗಿ ಕ್ಷಮತೆ ಕಾಯ್ದುಕೊಳ್ಳಲು ಪೂರ್ಣ ಪ್ರಮಾಣದ ಫಿಸಿಯೋಥೆರಪಿಸ್ಟ್ ಒಬ್ಬರನ್ನು ನಿಯೋಜಿಸಿಕೊಳ್ಳಲು ಭಾರತದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗೆ 9 ಲಕ್ಷ ರೂಪಾಯಿ ಧನಸಹಾಯವನ್ನು ಕ್ರೀಡಾ ಸಚಿವಾಲಯ ಒದಗಿಸಿದೆ.
ಬಿಡುಗಡೆಯಾಗಿರುವ ಈ ಮೊತ್ತವು 15 ತಿಂಗಳುಗಳ ಕಾಲಾವಧಿಯದ್ದಾಗಿದ್ದು, ಈ ತಿಂಗಳಿನಿಂದಲೇ ಅದು ಅನ್ವಯವಾಗಲಿದೆ.
ರಿಯೋ ಡಿ ಜನೈರೋದಲ್ಲಿ ಭಾರತದ ಪದಕ ಭರವಸೆಯಾಗಿರುವ ಸೈನಾ ನೆಹ್ವಾಲ್ ದೈಹಿಕವಾಗಿ ಕ್ಷಮತೆ ಕಾಯ್ದುಕೊಳ್ಳುವುದು ತೀರಾ ಅಗತ್ಯ. ಈ ಸಲುವಾಗಿ ಅವರು ತಾನಿಚ್ಛಿಸಿದ ಫಿಸಿಯೋ ಒಬ್ಬರನ್ನು ನೇಮಿಸಿಕೊಳ್ಳಲು ಮುಕ್ತರಾಗಿದ್ದು, ಅವರ ಸೇವೆಗೆ ತಿಂಗಳಿಗೆ ಅರವತ್ತು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಕ್ರೀಡಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
Advertisement