ಪಾಕಿಸ್ತಾನದ ಜಹೀರ್ ಅಬ್ಬಾಸ್ ಐಸಿಸಿ ನೂತನ ಅಧ್ಯಕ್ಷ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಹೀರ್ ಅಬ್ಬಾಸ್ ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ನೂತನ ಅಧ್ಯಕ್ಷ ಜಹೀರ್ ಅಬ್ಬಾಸ್(ಸಾಂದರ್ಭಿಕ ಚಿತ್ರ )
ಐಸಿಸಿ ನೂತನ ಅಧ್ಯಕ್ಷ ಜಹೀರ್ ಅಬ್ಬಾಸ್(ಸಾಂದರ್ಭಿಕ ಚಿತ್ರ )

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಹೀರ್ ಅಬ್ಬಾಸ್ ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬ್ರಿಡ್ಜ್ ಟೌನ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ಮಹಾಧಿವೇಶನದ ಮೂರನೇ ದಿನ ಮುಂದಿನ ವರ್ಷದ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದಿದೆ. ತಮನ್ನು ಐಸಿಸಿಯ ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸದಸ್ಯರಿಗೆ ಜಹೀರ್ ಅಬ್ಬಾಸ್ ಧನ್ಯವಾದ ತಿಳಿಸಿದ್ದಾರೆ.

ಐಸಿಸಿ ಹಾಲಿ ಅಧ್ಯಕ್ಷ ಹಾಗೂ ಬಿಸಿಸಿ ನ್ನೂ ಪ್ರತಿನಿಧಿಸುವ ಶ್ರೀನಿವಾಸನ್, ಜಹೀರ್ ಅಬ್ಬಾಸ್ ಆಯ್ಕೆಗೆ ಬೆಂಬಲ ನೀಡಿದ್ದು ಕ್ರಿಕೆಟ್ ಕ್ರೀಡೆಯನ್ನು ಕೌಶಲ್ಯದಿಂದ ಆಡಿದ ಐಕಾನ್ ಆಗಿದ್ದು ಕ್ರಿಕೆಟ್ ಗೆ ಜಹೀರ್ ಅಬ್ಬಾಸ್ ಉತ್ತಮ ರಾಯಭಾರಿ ಎಂದು ಬಣ್ಣಿಸಿದ್ದಾರೆ.  

ಐಸಿಸಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಜಹೀರ್ ಅಬ್ಬಾಸ್, 1969 -1985 ರ ನಡುವೆ, ತಮ್ಮ ವೃತ್ತಿ ಜೀವನದಲ್ಲಿ 78 ಟೆಸ್ಟ್ ಪಂದ್ಯಗಳು, 62 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 5,062 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 2,572 ರನ್ ಗಳನ್ನು ಗಳಿಸಿದ್ದಾರೆ.

ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮುಸ್ತಫಾ ಕಮಲ್ ಏಪ್ರಿಲ್ ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಇದರಿಂದಾಗಿ ಕ್ರಿಕೆಟ್ ಮಂಡಳಿಯ ಅತ್ಯುನ್ನತ ಹುದ್ದೆ ತೆರವುಗೊಂಡಿತ್ತು. ಈಗ ವಾವಾದ ರಹಿತವಾದ ವ್ಯಕ್ತಿ ಎಂದು ಖ್ಯಾತರಾಗಿರುವ ಜಹೀರ್ ಅಬ್ಬಾಸ್ ರನ್ನು ಆಯ್ಕೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com