ಭಾರತದ ವನಿತೆಯರಿಗೆ ಜಯ

ಸತತ ಎರಡು ಸೋಲಿನಿಂದ ಕಂಗೆಟ್ಟಿದ ಭಾರತದ ವನಿತೆಯರ ಹಾಕಿ ತಂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.
ಭಾರತದ ವನಿತೆಯರ ಹಾಕಿ ತಂಡ(ಸಾಂದರ್ಭಿಕ ಚಿತ್ರ)
ಭಾರತದ ವನಿತೆಯರ ಹಾಕಿ ತಂಡ(ಸಾಂದರ್ಭಿಕ ಚಿತ್ರ)

ಬೆಲ್ಜಿಯಂ: ಸತತ ಎರಡು ಸೋಲಿನಿಂದ ಕಂಗೆಟ್ಟಿದ ಭಾರತದ ವನಿತೆಯರ ಹಾಕಿ ತಂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಆ ಮೂಲಕ ವಿಶ್ವ ಹಾಕಿ ಲೀಗ್ ಸೇಮಿಫಿಲ್ ಟೂರ್ನಿಯಲ್ಲಿ ಜಯದ ನಗೆಬೀರಿದೆ.

ಮೂರನೆ ಗುಂಪು ಹಂತದ ಪಂದ್ಯದದಲ್ಲಿ ಭಾರತ ವನಿತೆಯರು 3 -1, ಗೋಲುಗಳ ಅಂತರದಿಂದ ಪೋಲೆಂಡ್ ವಿರುದ್ಧ ಆಟಗಾರ್ತಿಯರ ಮೇಲೆ ನಿಯಂತ್ರಣ ಸಾಧಿಸಿ ಪೂರ್ಣ ಪ್ರಮಾಣದಲ್ಲಿ ಪ್ರಾಬಲ್ಯ ಮೆರೆದರು. ಪಂದ್ಯದ ಎರಡನೆ ಕ್ವಾರ್ಟರ್ ನ ಆರಂಭದಲ್ಲಿ ಅಂದರೆ, 21 ನೇ ನಿಮಿಷದಲ್ಲಿ ಪೂನಂ ರಾಣಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು.

ನಂತರ 29 ನೇ ನಿಮಿಷದಲ್ಲಿ ಸುನಿತಾ ಲಕ್ರಾ ಎದುರಾಳಿ ಗೋಲ್ ಕೀಪರ್ ಕಣ್ತಪ್ಪಿಸಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ನುಸುಳಿದರು, ಈ ಮೂಲಕ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಭಾರತ 2 -0 ಗೋಲುಗಳ ಮುನ್ನಡೆ ಸಾಧಿಸಿ ಪೋಲೆಂಡ್ ಆಟಗಾರ್ತಿಯರ ಮೇಲೆ ಒತ್ತಡ ಹೇರುವಲ್ಲಿ ಸಫಲವಾಯಿತು.

ಪಂದ್ಯದ ಮೂರನೇ ಕ್ವಾರ್ಟರ್ ನಲ್ಲೂ ಭಾರತ ವನಿತೆಯರು ಪೋಲೆಂಡ್ ಆಟಗಾರ್ತಿಯರನ್ನು ಕಾಡುವಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ ಭಾರತ ವನಿತೆಯರ ಪ್ರಾಬಲ್ಯ ಹೆಚ್ಚಿತ್ತು.

ಪಂದ್ಯದ ನಾಲ್ಕನೆ ಹಾಗೂ ಅಂತಿಮ ಕ್ವಾರ್ಟರ್ ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಈ ವೇಳೆ ಪಂದ್ಯದಲ್ಲಿ ಪ್ರತಿರೋಧ ನೀಡಿದ ಪೋಲೆಂಡ್ ಆಟಗಾರ್ತಿಯರು ಗೋಳಿನ ಖಾತೆ ತೆರೆದರು. 49 ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಪೋಲೆಂಡ್ ಫೀಲ್ಡ್ ಗೋಲು ದಾಖಲಿಸಿತು.ಇದು ಅವರು ಟೂರ್ನಿಯಲ್ಲಿ ಹಳಿಸಿದ ಮೊದಲ ಗೋಲು.

54 ನೇ ನಿಮಿಷದಲ್ಲಿ ಲಕ್ರಾ ಹಾಗೂ ರಾಣಿ ಅವರ ಪಾಸ್ ನಿಂದ ಬಂದ ಚೆಂಡನ್ನು ವಂದನಾ ಗೋಲಿನತ್ತ ಸಾಗುವಂತೆ ಮಾಡಿದರು. ನಂತರ ಒತ್ತಡ ಮುಂದುವರೆಸಿದ ಭಾರತ ಆಟಗಾರ್ತಿಯರು ಪಂದ್ಯದಲ್ಲಿ ಗೆಲವು ದಾಖಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com