ಸತ್ನಮ್ ಸಿಂಗ್ ಎನ್ ಬಿಎಗೆ ಸೇರ್ಪಡೆ

ಪಂಜಾಬ್ ರಾಜ್ಯದ ಸತ್ನಮ್ ಸಿಂಗ್ ಬಮರ 2015ನೇ ಸಾಲಿನ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಸಂಸ್ಥೆಗೆ(ಎನ್ ಬಿಎ)ಆಯ್ಕೆಯಾಗಿದ್ದಾರೆ...
ಎನ್ ಬಿಎಗೆ ಆಯ್ಕೆಗೊಂಡ ಬಳಿಕ ಮವರಿಕ್ಸ್ ಪ್ರಧಾನ ವ್ಯವಸ್ಥಾಪಕ ಡಾನಿ ನೆಲ್ಸನ್ ರೊಂದಿಗೆ ಸತ್ನಮ್ ಸಿಂಗ್
ಎನ್ ಬಿಎಗೆ ಆಯ್ಕೆಗೊಂಡ ಬಳಿಕ ಮವರಿಕ್ಸ್ ಪ್ರಧಾನ ವ್ಯವಸ್ಥಾಪಕ ಡಾನಿ ನೆಲ್ಸನ್ ರೊಂದಿಗೆ ಸತ್ನಮ್ ಸಿಂಗ್

ನವದೆಹಲಿ:ಪಂಜಾಬ್ ರಾಜ್ಯದ ಸತ್ನಮ್ ಸಿಂಗ್ ಬಮರ 2015ನೇ ಸಾಲಿನ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಸಂಸ್ಥೆಗೆ(ಎನ್ ಬಿಎ)ಆಯ್ಕೆಯಾಗಿದ್ದಾರೆ.

7.2 ಅಡಿ ಎತ್ತರದ 290 ಪೌಂಡ್ ತೂಕದ ಸತ್ನಮ್ ಸಿಂಗ್ ಪಂಜಾಬ್ ರಾಜ್ಯದ ಬಲ್ಲೋಕಿ  ಎಂಬ ಕುಗ್ರಾಮದಿಂದ ಬಂದಿದ್ದು, ಬಾಸ್ಕೆಟ್ ಬಾಲ್ ಸಂಸ್ಥೆಗೆ ಆಯ್ಕೆಯಾದ ಮೊದಲ ಭಾರತೀಯರಾಗಿ ಇತಿಹಾಸ ನಿರ್ಮಿಸಿದ್ದಾರೆ.

ಟೆಕ್ಸಾಸ್ ನ ಡಲ್ಲಸ್ ನಲ್ಲಿರುವ ಬಾಸ್ಕೆಟ್ ಬಾಲ್ ತಂಡದ ವೃತ್ತಿಪರ ಆಟಗಾರರು ಸತ್ನಮ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ.ಸಿಂಗ್ ಅವರು 12ನೇ ವರ್ಷದಲ್ಲಿದ್ದಾಗ, ಸರ್ಕಾರದ ಧನಸಹಾಯದಿಂದ ಬಾಸ್ಕೆಟ್ ಬಾಲ್ ಅಕಾಡೆಮಿಗೆ ಕಳುಹಿಸಲಾಗಿತ್ತು. ನಂತರ ಅಲ್ಲಿಂದ ಫ್ಲೋರಿಡಾಗೆ ತೆರಳಿ ಐಎಂಜಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು.

ತಮ್ಮ ಆಯ್ಕೆ ನಂತರ ವೆಬ್ ಸೈಟ್ ವೊಂದಕ್ಕೆ ಸಂದರ್ಶನ ನೀಡಿದ ಸತ್ನಮ್ ಸಿಂಗ್, ಎನ್ ಬಿಎಗೆ ಆಯ್ಕೆ ಆಗುವುದೆಂದರೆ ಅಷ್ಟು ಸುಲಭವಲ್ಲ. ಕಠಿಣ ಶ್ರಮ ಅಗತ್ಯ. ನಾನು ಆಯ್ಕೆಯಾಗುವ ಮೊದಲು ಹಲವಾರು ಸ್ನೇಹಿತರು, ನೀನು ಯಾವಾಗ ಎನ್ ಬಿಎಗೆ ಸೇರುತ್ತೀಯಾ ಎನ್ನುತ್ತಿದ್ದರು. ಅವರ ಆಸೆ, ಹಾರೈಕೆಗಳು ನಿಜವಾಗಿವೆ ಎಂದರು.

ಭಾರತದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಬಾಸ್ಕೆಟ್ ಬಾಲ್  ಆಟ ಅಭಿವೃದ್ಧಿ ಹೊಂದುತ್ತಿದೆ. ಹಲವಾರು ಮಂದಿ ಎನ್ ಬಿಎ ಕೋಚ್ ಗಳು ಭಾರತದಲ್ಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com