ಬ್ಯಾಟಿಂಗ್ ಪವರ್ ಪ್ಲೇ ರದ್ದು

ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬ್ಯಾಟಿಂಗ್ ಪವರ್ ಪ್ಲೇಗೆ ಕೊಕ್ಕೆ ಹಾಕಲು ನಿರ್ಧರಿಸಿದೆ.
ಬ್ಯಾಟಿಂಗ್ ಪವರ್ ಪ್ಲೇ ರದ್ದು

ಗಾಲ್ಗರಿ: ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬ್ಯಾಟಿಂಗ್ ಪವರ್ ಪ್ಲೇಗೆ ಕೊಕ್ಕೆ ಹಾಕಲು ನಿರ್ಧರಿಸಿದೆ.

ಐಸಿಸಿ ವಾರ್ಷಿಕ ಸಭೆಯಲ್ಲಿ ಈ ನಿರ್ಣಯವನ್ನು ತಳೆಯಲಾಗಿದ್ದು, ಕ್ಷೇತ್ರ ರಕ್ಷಣೆಗೆ ವಿಧಿಸಿದ್ದ ಕೆಲವೊಂದು ಕಟ್ಟುಪಾಡಿಗಳಿಗೆ ಹೊಸ ತಿದ್ದುಪಡಿ ತಂದಿದೆ. ಅದರಂತೆ ಇನ್ನು ಮುಂದೆ ಏಕದಿನ ಅಂದ್ಯಗಳ ಇನ್ನಿಂಗ್ಸ್ ಒಂದರ ಕೊನೆಯ 10 ಓವರ್ ಗಳನ್ನು ಬಳಸಿಕೊಳ್ಳಲು ಅವಕಾಶಕಲ್ಪಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ. ಆದರೆ ಈ ಮೊದಲು ನಾಲ್ವರು ಕ್ಷೇತ್ರ ರಕ್ಷಕರುಗಳಷ್ಟೆ ಮೊದಲ 10 ಓವರ್ ಗಳಲ್ಲಿ 30 ಯಾರ್ಡ್ ವೃತ್ತದಾಚೆಗೆ ಇರಬೇಕಿತ್ತು.  ಏಕದಿನ ಪಂದ್ಯಾವಳಿಯ ಮೊದಲ 10 ಓವರ್ ಗಳಲ್ಲಿ ಕ್ಯಾಚಿಂಗ್ ಪೊಸಿಷನ್ ನಲ್ಲಿ ಇಬ್ಬರು ಫೀಲ್ಡರ್ ಗಳನ್ನು ಬಳಸಿಕೊಳ್ಳುವುದನ್ನು ಕೈಬಿಡಲು ಐಸಿಸಿ ಸೂಚಿಸಿದೆ.

ಇಷ್ಟಲ್ಲದೆ, ಬೌಲರ್ ಎಸೆಯುವ ಎಲ್ಲಾ ನೋ-ಬಾಲ್ ಗಳಿಗೆ ಆಟ ಫ್ರೀ ಹಿಟ್ ಗೆ ಕಾರಣಾಗುತ್ತಾನೆ ಎಂದೂ ತಿಳಿಸಿರುವ ಐಸಿಸಿ, ಇದು ಏಕದಿನ ಮತ್ತು ಟಿ-20 ಪಂದ್ಯಗಳಿಗೆ ಅನ್ವಯವಾಗಲಿದೆ ಎಂದು ಹೇಳಿದೆ. ಅಂತೆಯೇ ಈ ನೂತನ ಬದಲಾವಣೆಯ ನಿಯಮವು ಜು.5 ರ ನಂತರದ ಸರಣಿಯಿಂದ ಜಾರಿಗೆ ಬರಲಿದೆ ಎಂದೂ ಐಸಿಸಿ ಪ್ರಕಟಣೆ ತಿಳಿಸಿದೆ.

ಯಶಸ್ವಿ ವಿಶ್ವಕಪ್ ಟೂರ್ನಿಯ ಬಳಿಕ ಏಕದಿನ ಪಂದ್ಯಾವಳಿಯ ರೂಪುರೇಷೆ ಕುರಿತು ಸಮಗ್ರವಾಗಿ ಪುನರ್ ಪರಿಶೀಲಿಸಿದ ಬಳಿಕ ಜನಪ್ರಿಯತೆಯನ್ನು ಕಾಯ್ದುಕೊಳ್ಳುವ ದಿಸೆಯಲ್ಲಿ ಹೆಚ್ಚಿನ ಬದಲಾವಣೆಯ ಅಗತ್ಯ ಕಾಣಲಿಲ್ಲ. ಜನತೆಗೆ ಏಕದಿನ ಪಂದ್ಯವನ್ನು ಇನ್ನಷ್ಟು ಹತ್ತಿರ ಹಾಗೂ ಸುಲಭವಾಗಿ ಗ್ರಹಿಸುವಂತೆ ಈ ಪುನರ್ ಪರಿಶೀಲನಾ ಅವಕಾಶವನ್ನು ಬಳಸಿಕೊಂಡೆವು. ಇದು ಬ್ಯಾಟ್ ಹಾಗೂ ಚೆಂಡಿನ ನಡುವೆ ಇರುವ ಅಸಮತೋಲನವನ್ನು ಹೋಗಲಾಡಿಸಿ ಪಂದ್ಯವನ್ನು ಇನ್ನಷ್ಟು ರೋಚಕವಾಗಿಸುತ್ತದೆ ಎಂಬ ನಂಬಿಕೆ ಇದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ ಸನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com