
ದುಬೈ: ಕ್ರಿಕೆಟ್ ಕ್ರೀಡೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟಿರುವ ಐಸಿಸಿ, ಈ ಬಗ್ಗೆ ಇರುವ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.
ಯಾವುದೇ ದೇಶದಲ್ಲಿ ಆಗುವ ಕ್ರಿಕೆಟ್ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪರಮಾಧಿಕಾರ ನೀಡಲಾಗಿದೆ.
ಅಲ್ಲದೆ, ವಿವಿಧ ದೇಶಗಳಲ್ಲಿನ ಕ್ರಿಕೆಟ್ ಮಂಡಳಿಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳ ನಡುವೆ ಮತ್ತಷ್ಟು ಸೌಹಾರ್ದ ವಾತಾವರಣ ನಿರ್ಮಿಸಬೇಕೆಂದು ಐಸಿಸಿ ಸೂಚಿಸಿದೆ.
Advertisement