
ಲಂಡನ್: ವರ್ಷದ ಮೂರನೇ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಟೆನಿಸ್ ನ ಘಟಾನುಘಟಿಗಳು ಪ್ರಶಸ್ತಿ ಪಡೆಯಲು ಕಣಕ್ಕಿಳಿಯುತ್ತಿದ್ದಾರೆ. ಟೂರ್ನಿಯ ಆರಂಭಿಕ ದಿನದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಸೆಣಸಲಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಜೂ.29 ರಿಂದ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಫಿಲಿಪ್ ಕೊಲ್ಸ್ ಚೈಬರ್ ವಿರುದ್ಧ ಜೊಕೊವಿಕ್ ಸೆಣಸಲಿದ್ದಾರೆ. 5 :30 ಕ್ಕೆ ಪ್ರಾರಂಭವಾಗಲಿದೆ ರಾತ್ರಿ 9 :30 ಕ್ಕೆ ಪ್ರಾರಂಭವಾಗಲಿರುವ ಪಂದ್ಯದಲ್ಲಿ ಲೆಯ್ಟನ್ ಹೆವಿಟ್- ಫಿನ್ ಜಾರ್ಕೊ ನೈಮನೆನ್ ಸೆಣಸಲಿದ್ದಾರೆ. ಈ ಪಂದ್ಯ ಸಂಜೆ 6 ಕ್ಕೆ ಆರಂಭವಾಗಲಿದೆ. ಲೆನಾರ್ಡೊ ಮೇಯರ್, ತಮ್ಮ ಪ್ರತಿಸ್ಪರ್ಧಿ ಕೊಕ್ಕಿನಾಕಿಸ್ ವಿರುದ್ಧ ಆಡಲಿದ್ದು, ಸಂಜೆ 4 ಕ್ಕೆ ಪ್ರಾರಂಭವಾಗಲಿದೆ. ಜಪಾನ್ ನ ಕಾಯ್ ನಿಶಿಕೋರಿ, ಸೈಮನ್ ಬೊಲ್ಲೇಲ್ಲಿ ವಿರುದ್ಧ ಆಡಲಿರುವ ಪಂದ್ಯ ಸಂಜೆ 7 ಕ್ಕೆ ಪ್ರಾರಂಭವಾಗಲಿದೆ.
ಫೆರರ್ ಔಟ್: ಮೊಣಕೈ ಗಾಯದ ಸಮಸ್ಯೆಗೆ ಸಿಲುಕಿರುವ ಎಂಟನೇ ಶ್ರೇಯಾಂಕಿತ ಆಟಗಾರ ಡೇವಿಡ್ ಫೆರರ್ ವಿಂಬಲ್ಡನ್ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
Advertisement