
ಲಂಡನ್: ವಿಶ್ವದ ಪ್ರಮುಖ ಟೆನ್ನಿಸಿಗರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಈ ಈರ್ವರೂ ಆಟಗಾರರಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ನೇರ ಸೆಟ್ ಗಳ ಸುಲಭ ಗೆಲುವು ದಾಖಲಿಸಿ ಎರಡನೆ ಸುತ್ತಿಗೆ ಜಿಗಿದರು. ವೃತ್ತಿ ಬದುಕಿನ 18 ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಾಗಿ ಅವಿಶ್ರಾಂತ ಹೋರಾಟ ನಡೆಸುತ್ತಿರುವ ಸ್ವಿಸ್ ಆಟಗಾರ ಬೋಸ್ನಿಯಾ ಹಾಗೂ ಹರ್ಜೆಗೋವಿನಾದ ದಾಮೀರ್ ಡ್ಜುಮರ್ ವಿರುದ್ಧ 6 -1 , 6 -3 , 6 -3 ಸೆಟ್ ಗಳ ಸುಲಭ ಗೆಲುವು ಪಡೆದರೆ, ಇತ್ತ ಎಡಗೈ ಆಟಗಾರ ತೋಮಾಸ್ ಬೆಲ್ಲೂಸಿ ವಿರುದ್ಧ 6 -4 , 6 -2 , 6 -3 ಸೆಟ್ ಗಳಿಂದ ಜಯ ಪಡೆದರು.
ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಒಟ್ಟು ಏಳು ಬಾರಿ ಚಾಂಪಿಯನ್ ಆಗಿರುವ ಫೆಡರರ್, ಡಾಮಿರ್ ವಿರುದ್ಧ ಹೆಚ್ಚೇನೂ ಪ್ರಯಾಸಪಡದೆ ಗೆಲುವು ದಾಖಲಿಸಿದರು. ಆದಾಗ್ಯೂ ಮೊದಲ ಸೆಟ್ ನಲ್ಲಿ ಕೇವಲ ಒಂದೇ ಒಂದು ಗೇಮ್ ನ್ನು ಬಿಟ್ಟು ಕೊಟ್ಟ ಫೆಡರರ್ ಎರಡು ಮತ್ತು ಮೂರನೇ ಸೆಟ್ ನಲ್ಲಿ ಪ್ರತಿಸ್ಪರ್ಧಿಯಿಂದ ಒಂದಷ್ಟು ಪ್ರತಿರೋಧವನ್ನು ಎದುರಿಸಬೇಕಾಯಿತು. ಆದರೆ ಈ ಕೊನೆಯ ಎರಡೂ ಸೆಟ್ಗಳಲ್ಲಿಯೂ ತನ್ನ ಅನುಭವವನ್ನು ಧಾರೆ ಎರೆದ ಫೆಡರರ್ ಅನಾಯಾಸವಾಗಿ ಗೆಲುವನ್ನು ತನ್ನದಾಗಿಸಿಕೊಂಡರು.
ಮರ್ರೆಗೆ ಜಯ: ಬ್ರಿಟನ್ ಆಟಗಾರ ಆಂಡಿ ಮರ್ರೆ ಸಹ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಮಿಖೈಲ್ ಕುಕುಸ್ಕಿನ್ಸ್ ವಿರುದ್ಧ 6 -4 , 6 -7 (7 -3 ), 6 -4 ಸೆಟ್ ಗಳ ಅಂತರದಲ್ಲಿ ಗೆದ್ದರು.
ಡಬಲ್ಸ್ ನಿಂದ ಹಿಂದೆ ಸರಿದ ಸೆರೆನಾ, ವೀನಸ್: ಅಮೇರಿಕಾದ ಟೆನಿಸ್ ತಾರಾ ಸಹೋದರಿಯರಾದ ಸೆರೆನಾ ವಿಲಿಯಮ್ಸ್ ಹಾಗೂ ವೀನಸ್ ವಿಲಿಯಮ್ಸ್ ವಿಂಬಲ್ಡನ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಿಂದ ಹಿಂದೆ ಸರಿದಿದ್ದಾರೆ. ದೀಢೀರನೆ ಈ ನಿರ್ಧಾರ ಕೈಗೊಂಡಿದ್ದು ಕಾರಣ ತಿಳಿದುಬಂದಿಲ್ಲ.
Advertisement