ಹೊಸ ಸ್ವರೂಪದಲ್ಲಿ ಡಕ್‍ವರ್ತ್ ಲೂಯಿಸ್

ಕ್ರಿಕೆಟ್ ಲೋಕದ ವಿವಾದಿತ `ಡಕ್‍ವರ್ತ್-ಲೂಯಿಸ್ ನಿಯಮಾವಳಿ' ಇನ್ನು ಹೊಸ ಅವತಾರದಲ್ಲಿ ಅಸ್ತಿತ್ವಕ್ಕೆ ಬರಲಿದೆ.
ಡಕ್‍ವರ್ತ್ ಲೂಯಿಸ್ ನಿಯಮಾವಳಿ
ಡಕ್‍ವರ್ತ್ ಲೂಯಿಸ್ ನಿಯಮಾವಳಿ

ಮೆಲ್ಬರ್ನ್: ಕ್ರಿಕೆಟ್ ಲೋಕದ ವಿವಾದಿತ `ಡಕ್‍ವರ್ತ್-ಲೂಯಿಸ್ ನಿಯಮಾವಳಿ' ಇನ್ನು ಹೊಸ ಅವತಾರದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಬದಲಾದ ಕ್ರಿಕೆಟ್ ಟ್ರೆಂಡ್‍ಗೆ ತಕ್ಕಂತೆ ಡಕ್‍ವರ್ತ್-ಲೂಯಿಸ್ ನಿಯಮಗಳನ್ನು ಪರಿಷ್ಕರಿಸಲಾಗಿದೆ ಎಂದು ಐಸಿಸಿ ಹೇಳಿದೆ.

ಏಕದಿನ ಪಂದ್ಯಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದ್ದು, ಇತ್ತೀಚೆಗೆ, ತಂಡಗಳು 300 ರನ್ ಹಾಗೂ ಅದಕ್ಕೂ ಹೆಚ್ಚಿನ ಮೊತ್ತಗಳನ್ನು ಗಳಿಸುತ್ತಿವೆ. ಅಲ್ಲದೆ, ಕೆಲವಾರು ಓವರ್‍ಗಳಲ್ಲಿ ರನ್ ಹೊಳೆಯೇ ಹರಿದುಬರುತ್ತಿದೆ. ಈ ಎಲ್ಲಾ ಹೊಸ ಬೆಳವಣಿಗೆಗಳನ್ನು ಪರಿಗಣಿಸಿ ಡಕ್‍ವರ್ತ್- ಲೂಯಿಸ್ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಕ್ರಿಕೆಟ್ ತಜ್ಞ ಸ್ಟೀವ್ ಸ್ಟರ್ನ್ ಅವರು ನೀಡಿದ ಸಲಹೆಗಳನ್ನು ಮೂಲ ಡಕ್‍ವರ್ತ್-ಲೂಯಿಸ್ ಮಾದರಿಯಲ್ಲಿ ಅಳವಡಿಸಲಾಗಿದ್ದು, ಪರಿಷ್ಕೃತ ಆವೃತ್ತಿಗೆ `ಡಕ್‍ವರ್ತ್-ಲೂಯಿಸ್- ಸ್ಟರ್ನ್ ನಿಯಮಾವಳಿಗಳು' ಎಂದು ಮರುನಾಮಕರಣ ಮಾಡಲಾಗಿದೆ.

ವೈಶಿಷ್ಟ್ಯ: ಪರಿಷ್ಕೃತ ನಿಯಮಾವಳಿಗಳಲ್ಲಿ ಚೇಸಿಂಗ್ ತಂಡಕ್ಕೆ ಯಾವುದೇ ರೀತಿಯ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ದೊಡ್ಡ ಗುರಿಯನ್ನು ಬೆನ್ನತ್ತಲು ಕ್ರೀಸ್‍ಗೆ ಇಳಿದ ತಂಡಕ್ಕೆ ಮಳೆ ಅಥವಾ ಇನ್ನಿತರ ಕಾರಣಗಳಿಂದ ಅಡಚಣೆಯಾದರೆ, ಹಲವಾರು ಹಂತದ ಲೆಕ್ಕಾಚಾರಗಳ ಮುಖಾಂತರ ಆ ತಂಡಕ್ಕೆ ಕಷ್ಟ ಸಾಧ್ಯ ಗುರಿಯನ್ನು ನೀಡಲಾಗುವುದು. 1992ರ ವಿಶ್ವಕಪ್ ಸೆಮಿಫೈನಲ್‍ನಲ್ಲಿ ಹರಿಣಗಳ ಪಡೆಗೆ ಸಿಕ್ಕಿದಂತೆ (1 ಎಸೆತಕ್ಕೆ 22 ರನ್) ಅಸಾಧ್ಯ ಎಂಬಂಥ ಗುರಿಯನ್ನು ನೀಡುವ ಪ್ರಮೇಯವಿನ್ನು ದೂರ ಸರಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com