ಸಂಗಕಾರನಂತಹ ಆಟಗಾರ ಬೇರೊಬ್ಬ ಇಲ್ಲ: ಜಯಸೂರ್ಯ

ವಿಶ್ವದಲ್ಲಿಯೇ ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಕಾರನಂತಹ ಆಟಗಾರ ಬೇರೊಬ್ಬ ಇಲ್ಲ ಎಂದು ಶ್ರೀಲಂಕಾ ಆಯ್ಕೆ ಸಮಿತಿಯ ಅಧ್ಯಕ್ಷ ಸನತ್ ಜಯಸೂರ್ಯ ಹೇಳಿದ್ದಾರೆ...
ಸನತ್ ಜಯಸೂರ್ಯ ಮತ್ತು  ಕುಮಾರ್ ಸಂಗಕಾರ
ಸನತ್ ಜಯಸೂರ್ಯ ಮತ್ತು ಕುಮಾರ್ ಸಂಗಕಾರ
Updated on

ವಿಲ್ಲಿಂಗ್‌ಟನ್: ವಿಶ್ವದಲ್ಲಿಯೇ ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಕಾರನಂತಹ ಆಟಗಾರ ಬೇರೊಬ್ಬ ಇಲ್ಲ ಎಂದು ಶ್ರೀಲಂಕಾ ಆಯ್ಕೆ ಸಮಿತಿಯ ಅಧ್ಯಕ್ಷ ಸನತ್ ಜಯಸೂರ್ಯ ಹೇಳಿದ್ದಾರೆ.

ಭಾನುವಾರ ನಡೆದ ವಿಶ್ವಕಪ್ ಟೂರ್ನಿಯ ಶ್ರೀಲಂಕಾ-ಇಂಗ್ಲೆಂಡ್ ವಿರುದ್ಧದ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಕಾರ ಎರಡನೇ ಬಾರಿ ಸಿಡಿಸಿದ ಶತಕದ ಕುರಿತು ಸಂಗಕಾರರನ್ನು ಹಾಡಿಹೊಗಳಿರುವ ಜಯಸೂರ್ಯ, ಪಂದ್ಯದ ನಡೆಯುತ್ತಿರುವ ವೇಳೆಯಲ್ಲಿಯೇ ಯೋಜನೆ ರೂಪಿಸುವುದು, ತಂಡಕ್ಕೆ ಸರಿಯಾದ ರೀತಿಯಲ್ಲಿ ನಿರ್ದೇಶನ ನೀಡುವುದರಲ್ಲಿ ಕುಮಾರ್ ಸಂಗಕಾರ ಉತ್ತಮ ಹಾದಿಯಲ್ಲಿ ನಡೆಯುತ್ತಿದ್ದು, ಸಂಗಕಾರ ನಂತಹ ಆಟಗಾರ ಬೇರಾರು ಇಲ್ಲ. ಸಂಗಕಾರ ಇದೇ ರೀತಿಯ ನಡೆಯನ್ನು ನಾಯಕನಾಗಿ ಹಾಗೂ ಆಟಗಾರನಾಗಿ ಮುಂದುವರೆಸಿಕೊಂಡು ಹೋದರೆ ಮುಂದಿನಗಳಲ್ಲಿ ಶ್ರೀಲಂಕಾ ಮತ್ತಷ್ಟು ಯಶಸ್ಸಿನ ಹಾದಿಯುವಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದ್ದಾರೆ.

ನಿನ್ನೆ ನಡೆದ  ಶ್ರೀಲಂಕಾ-ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಂಗಕಾರ ಒಬ್ಬನೇ ಶತಕ ಸಿಡಿಸಲಿಲ್ಲ. ಲಹಿರು ತಿರಿಮನ್ನೆ ಕೂಡ ಶತಕ ಸಿಡಿಸಿದ್ದಾರೆ. ಇದರಿಂದಲೇ ತಿಳಿಯಬಹುದು ಸಂಗಕಾರ ತಂಡದಲ್ಲಿ ಯಾವ ರೀತಿಯ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು. ಸಂಗಕಾರ ಆಟಗಾರನಾಗಿಯಷ್ಟೇ ಅಲ್ಲ ಉತ್ತಮ ನಾಯಕನಾಗಿಯೂ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಶ್ರೀಲಂಕಾ ಆಟಗಾರ ತಿರಿಮನ್ನೆ ಅವರು ಸಂಗಕಾರಾ ಕುರಿತಂತೆ ಮಾತನಾಡಿದ್ದು, ಸಂಗಕಾರ ಅವರು ಆಟದ ಕುರಿತಂತೆ ನಮ್ಮಲ್ಲಿರುವ ಒತ್ತಡಗಳನ್ನು ದೂರಮಾಡುತ್ತಿದ್ದು, ಆಟಗಾರರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ನಾಯಕನಾಗಿ ಇರಬೇಕಾದ ಎಲ್ಲ ಲಕ್ಷಣಗಳು ಅವರಲ್ಲಿದ್ದು, ಎಂತಹ ಕಠಿಣ ಸಂದರ್ಭದಲ್ಲಿಯಾದರೂ ಸುಲಭವಾಗಿ ಹಾಗೂ ಅತ್ಯಂತ ಶೀಘ್ರವಾಗಿ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಸಂಗಕಾರ ಅವರ ನಿವೃತ್ತಿ ಕುರಿತಂತೆ ಯಾರಾದರೂ ಪ್ರಶ್ನೆ ಮಾಡಿದರೆ, ನನಗೆ ವಯಸ್ಸಾಗುತ್ತಿದೆ ನಿಜ ಆದರೆ ಬೇಗನೆ ನಿವೃತ್ತಿಗೊಳ್ಳುತ್ತಿದ್ದೇನೆ ಎನಿಸುತ್ತಿದೆ. ಆಟದ ಕುರಿತಂತೆ ಕೇಳಿದರೆ ಪ್ರತಿಯೊಂದು ಆಟವನ್ನು ಆಟವಾಗಿಯಷ್ಟೇ ಅಲ್ಲದೆ, ಖುಷಿಯಿಂದ ಆಡುತ್ತೇನೆ ಎಂದು ಹೇಳುತ್ತಿರುತ್ತಾರೆ ಎಂದು ಲಹಿರು ತಿರಿಮನ್ನೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com