ಕಿಡಂಬಿ ಶ್ರೀಕಾಂತ್
ಕ್ರೀಡೆ
ಬ್ಯಾಡ್ಮಿಂಟನ್: ಸ್ವಿಸ್ ಓಪನ್ ಗೆದ್ದ ಕಿಡಂಬಿ ಶ್ರೀಕಾಂತ್
ಬಾಸೆಲ್: ಭಾರತದ ಬ್ಯಾಡ್ಮಿಂಟನ್ ತಾರೆ ಕೆ. ಶ್ರೀಕಾಂತ್ ಭಾನುವಾರ ಸ್ವಿಸ್ ಓಪನ್ ಗ್ರ್ಯಾಂಡ್ ಪ್ರೀ ಬ್ಯಾಡ್ಮಿಂಟನ್ ಟೂರ್ನಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೆಣೆಸಿದ ಕಿಡಂಬಿ ಶ್ರೀಕಾಂತ್ 21-15, 12-21, 21-14 ಸೆಟ್ ಗಳಿಂದ ಮಣಿಸಿದ್ದಾರೆ.
47 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಇಬ್ಬರೂ ಆಟಗಾರರ ನಡುವೆ ನಿಕಟ ಪೈಪೋಟಿ ನಡೆದಿತ್ತು. 2ನೇ ಸೆಟ್ ನಲ್ಲಿ ಶ್ರೀಕಾಂತ್ ಸೋತರೂ ಅಂತಿಮ ಸೆಟ್ ನಲ್ಲಿ ಚಾಕಚಕ್ಯತೆಯ ಪ್ರದರ್ಶನ ನೀಡಿ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಿದರು.
ಈ ಟೂರ್ನಿಯನ್ನು ಸೈನಾ ನೆಹ್ವಾಲ್ ಅವರು ಎರಡು ಬಾರಿ ಗೆದ್ದಿದ್ದರು. ಆದರೆ ಭಾರತೀಯ ಪುರುಷ ಆಟಗಾರನೊಬ್ಬ ಸ್ವಿಸ್ ಓಪನ್ ಗೆಲ್ಲುತ್ತಿರುವುದು ಇದೇ ಮೊದಲು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ