ಕಾಂಗರೂ ನೆಲದಲ್ಲಿ ಹ್ಯಾಮಿಲ್ಟನ್ ಅಬ್ಬರ

ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಲೂಯಿಸ್ ಹ್ಯಾಮಿಲ್ಟನ್ ಈ ಬಾರಿ ಗ್ರ್ಯಾನ್ ಪ್ರೀ ಋತುವಿನಲ್ಲಿ ಗೆಲವಿನ ಶುಭಾರಂಭ ಮಾಡಿದ್ದಾರೆ...
ಲೂಯಿಸ್ ಹ್ಯಾಮಿಲ್ಟನ್
ಲೂಯಿಸ್ ಹ್ಯಾಮಿಲ್ಟನ್

ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಲೂಯಿಸ್ ಹ್ಯಾಮಿಲ್ಟನ್ ಈ ಬಾರಿ ಗ್ರ್ಯಾನ್ ಪ್ರೀ ಋತುವಿನಲ್ಲಿ ಗೆಲವಿನ ಶುಭಾರಂಭ ಮಾಡಿದ್ದಾರೆ. ವರ್ಷದ ಮೊದಲ ಗ್ರ್ಯಾನ್ ಪ್ರೀ ರೇಸ್ ಆದ ಆಸ್ಟ್ರೇಲಿಯನ್ ಜಿಪಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಭಾನುವಾರ ನಡೆದ ಪ್ರಸಕ್ತ ಸಾಲಿನ ಚೊಚ್ಚಲ ರೇಸ್‍ನಲ್ಲಿ ಪೋಲ್  ಪ್ರೊ ಸಿಷನ್ ಪಡೆದು ರೇಸ್ ಆರಂಬಿsಸಿದ ಮರ್ಸಿಡೀಸ್ ತಂಡದ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅಗ್ರಸ್ಥಾನ ಪಡೆದರು. ಇನ್ನು ಮರ್ಸಿಡೀಸ್‍ನ ಮತ್ತೊಬ್ಬ ಚಾಲಕ ನಿಕೊ ರೋಸ್‍ಬರ್ಗ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಇನ್ನು ಈ ಬಾರಿಯಿಂದ  ಫೆರಾರಿ ತಂಡದ ಪರ ಕಣಕ್ಕಿಳಿಯುತ್ತಿರುವ ಸೆಬಾಸ್ಟಿಯನ್ ವೆಟಲ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಶನಿವಾರ ನಡೆದಿದ್ದ ಅರ್ಹತಾ ಸುತ್ತಿನ ರೇಸ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಪೋ ಲ್  ಪ್ರೊ ಸಿಷನ್ ಪಡೆದಿದ್ದ ಲೂಯಿಸ್ ಹ್ಯಾಮಿಲ್ಟನ್, ಮೊದಲಿಗರಾಗಿ ರೇಸ್
ಆರಂಬಿsಸಿದರು. 1:31:54.067 ಗಂಟೆಗಳ ಅವ„ಯಲ್ಲಿ ರೇಸ್‍ನ 58 ಲ್ಯಾಪ್ ಗಳನ್ನು ಮುಗಿಸುವ ಮೂಲಕ ಅಗ್ರ ಸ್ಥಾನ ಪಡೆದರು. ಈ ಮೂಲಕ 25 ಅಂಕಗಳನ್ನು ಪಡೆದುಕೊಂಡರೆ, ಮರ್ಸಿಡೀಸ್‍ನ ನಿಕೊ ರೋಸ್‍ಬರ್ಗ್ 18 ಹಾಗೂ ವೆಟಲ್ 15 ಅಂಕ ಸಂಪಾದಿಸಿಕೊಂಡರು. ಇನ್ನು ವಿಲಿಯಮ್ಸ್  ತಂಡದ
ಫೆ ಲಿಪೆ ಮೆಸ್ಸಾ ನಾಲ್ಕನೇ ಹಾಗೂ ಸೌಬರ್‍ನ  ಫೆಲಿಪೆ ನಾಸರ್ ಹಾಗೂ 5ನೇ ಸ್ಥಾನ ಪಡೆದರು.


ಟಾಪ್ 10ರಲ್ಲಿ  ಫೋ ರ್ಸ್
ಭಾರತದ ತಂಡವಾದ ಸಹರಾ ಫೋರ್ಸ್  ಇಂಡಿಯಾದ ಚಾಲಕರಾದ ನಿಕೊಹಲ್ಕೆನ್‍ಬರ್ಗ್ 7ನೇ ಹಾಗೂ ಸೆರ್ಯ ಪರೆಜ್ 10ನೇ ಸ್ಥಾನ
ಪಡೆದುಕೊಂಡಿದ್ದಾರೆ.
ಅರ್ಹತಾ ಸುತ್ತಿನಲ್ಲಿ ನಿರಾಸೆ ಮೂಡಿಸಿದ್ದ  ಫೋರ್ಸ್ ಇಂಡಿಯಾ ಚಾಲಕರು ಪ್ರಮುಖ ರೇಸ್‍ನಲ್ಲಿ ಅಂಕ ಸಂಪಾದನೆಯ ಸ್ಥಾನ ಪಡೆಯುವ ಮೂಲಕ
ಗಮನ ಸೆಳೆದರು. ನಿಕೊ ಹಲ್ಕೆನ್‍ಬರ್ಗ್ 6ನೇ ಸ್ಥಾನ ಪಡೆದರೆ, ಸರ್ಗಿಯೋ  1ಅಂಕ ಪಡೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com