ವಿಂಡೀಸ್ ಕ್ವಾರ್ಟರ್ ಫೈನಲ್‍ಗೆ

ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಕ್ವಾರ್ಟರ್ ಫೈನಲ್ ಕನಸು ನನಸಾಗಿದೆ. ಶನಿವಾರ ನಡೆದ ಯುಎಇ ವಿರುದ್ಧ ಪಂದ್ಯದಲ್ಲಿ 6 ವಿಕೆಟ್‍ಗಳ....
ವೆಸ್ಟ್ ಇಂಡೀಸ್ ತಂಡ
ವೆಸ್ಟ್ ಇಂಡೀಸ್ ತಂಡ
Updated on

ನೇಪಿಯರ್: ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಕ್ವಾರ್ಟರ್ ಫೈನಲ್ ಕನಸು ನನಸಾಗಿದೆ. ಶನಿವಾರ ನಡೆದ ಯುಎಇ ವಿರುದ್ಧ  ಪಂದ್ಯದಲ್ಲಿ 6 ವಿಕೆಟ್‍ಗಳ
ಜಯ ಸಾಧಿಸಿದ  ವಿಂಡೀಸ್, ತನ ಕ್ವಾರ್ಟರ್ ಹಾದಿಯನ್ನು  ಸುಗಮ ಮಾಡಿಕೊಂಡಿತು.
ಮೊದಲು ಬ್ಯಾಟ್ ಮಾಡಿದ್ದ ಯುಎಇ, 47.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 175 ರನ್  ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ  ವಿಂಡೀಸ್ 30.3 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ವಿಜಯದ ನಗೆ ಬೀರಿತು.
ಮೆಕ್‍ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮಳೆಗೆ ಈಡಾಗುವುದೋ ಎಂಬ ಭೀತಿ ಇತ್ತಂಡಗಳನ್ನು ಕಾಡಿದ್ದವು. ಆದರೆ, ವಿಂಡೀಸ್‍ಗೆ ಮಳೆರಾಯ ಪಂದ್ಯ ರದ್ದಾಗುವಷ್ಟರ ಮಟ್ಟಿಗೆ ತೊಂದರೆ ನೀಡಲಿಲ್ಲ. ಟಾಸ್ ಗೆದ್ದ ಹೋಲ್ಡರ್ ಮೊದಲು ಯುಎಇಯನ್ನು ಬ್ಯಾಟಿಂಗ್‍ಗೆ ಇಳಿಸಿದರು. ಆರಂಭದಿಂದಲೇ ಕುಸಿದ ಯುಎಇ, 50 ರನ್ ಗಡಿ ದಾಟುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಆದರೆ,  ಮಧ್ಯಮ ಕ್ರಮಾಂಕದ ಅಮ್ಜೆದ್  ಹಾಗೂ ನಾಸಿರ್ ಅಜೀಜ್ ಜೋಡಿ 7ನೇ ವಿಕೆಟ್‍ಗೆ ಶತಕದ ಜೊತೆಯಾಟ ನೀಡಿದರು. ಆದರೂ, ವಿಂಡೀಸ್ ವಿರುದ್ಧ  ಸವಾಲಿನ ಮೊತ್ತ ಪೇರಿಸಲು ಅವರಿಗೂ ಸಾಧ್ಯವಾಗಲಿಲ್ಲ. ಅಂತಿಮವಾಗಿ, 175 ರನ್‍ಗಳಿಗೆ ಯುಎಇ ಸರ್ವ ಪತನ
ಕಂಡಿತು. ಹೋಲ್ಡರ್ ನಾಲ್ಕು ವಿಕೆಟ್ ಕಬಳಿಸಿದರೆ, ಜೆರೊಮï ಟೇಲರ್ ಮೂರು ವಿಕೆಟ್ ಪಡೆದು ಯುಇಎ ಇನಿಂಗ್ಸ್ ಕುಸಿತಕ್ಕೆ ಪ್ರಮುಖ ಕಾರಣರಾದರು.
ಯುಎಇ ನೀಡಿದ್ದ ಸುಲಭಸಾಧ್ಯ ಮೊತ್ತ ಬೆನ್ನಟ್ಟಿದ ವಿಂಡೀಸ್‍ಗೆ ಆರಂಭಿಕ ಜಾನ್ಸನ್ ಚಾರ್ಲ್ಸ್ ಭದ್ರ ಅಡಿಪಾಯ ಹಾಕಿದರು. ಕ್ರಿಸ್ ಗೇಯ್ಲ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಅವರು, ತಮ್ಮ ಸಮರ್ಥನೆ ನೀಡಿದಿರಲ್ಲದೆ, ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು. ನಂತರ, ಮಧ್ಯಮ ಕ್ರಮಾಂಕದ ಜೊನಾಥನ್ಕಾರ್ಟರ್  ಹಾಗೂ ರಾಮ್ ದಿನ್ ಅವರು ತಂಡವನ್ನು ಗೆಲವಿನ ದಡ ಮುಟ್ಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com