ಭಾರತ-ಬಾಂಗ್ಲಾ ಕ್ವಾರ್ಟರ್‌‌ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸ್: ಮುಸ್ತಫಾ ಆರೋಪ

ವಿಶ್ವಕಪ್ ಕ್ವಾರ್ಟರ್‌‌ಪೈನಲ್ ಪಂದ್ಯದಲ್ಲಿ ಅಂಪೈರ್‌ಗಳ ತೀರ್ಪು ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುವ ಅನುಮಾನ ಕಾಡುತ್ತಿದೆ
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ವಿಶ್ವಕಪ್ ಕ್ವಾರ್ಟರ್‌‌ಪೈನಲ್ ಪಂದ್ಯದಲ್ಲಿ ಅಂಪೈರ್‌ಗಳ ತೀರ್ಪು ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಮುಸ್ತಫಾ ಕಮಲ್ ಆರೋಪಿಸಿದ್ದಾರೆ.

ಪಂದ್ಯದಲ್ಲಿ ಅಂಪೈರ್‌ಗಳ ತೀರ್ಪು ಪರಿಗಣಿಸಿದಲ್ಲಿ ಭಾರತ- ಬಾಂಗ್ಲಾ ಪಂದ್ಯ ಪೂರ್ವನಿರ್ಧರಿತವಾಗಿರಬಹುದು ಎನ್ನುವ ಅನುಮಾನಗಳು ಕಾಡುತ್ತಿದ್ದು ಮುಂದಿನ ಐಸಿಸಿ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸುವುದಾಗಿ ಕಮಲ್ ಹೇಳಿದ್ದಾರೆ. ಅಂಪೈರಿಂಗ್‌ನಲ್ಲಿ ಗುಣಮಟ್ಟವಿರಲಿಲ್ಲ. ಪಂದ್ಯವನ್ನು ಪೂರ್ವನಿರ್ಧರಿಸಿದಂತೆ ಕಂಡುಬಂತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾ ತಂಡ ಭಾರತದ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 109 ರನ್‌ಗಳಿಂದ ಸೋಲನುಭವಿಸಿದ ನಂತರ ಮುಸ್ತಫಾ ಕಮಾಲ್ ತಮ್ಮ ಹೇಳಿಕೆ ನೀಡಿದ್ದಾರೆ.

ಭಾರತ ತಂಡದ ರೋಹಿತ್ ಶರ್ಮಾ 90 ರನ್‌ಗಳಿಸಿದ್ದಾಗ ರುಬೆಲ್ ಹೊಸೈನ್ ಬೌಲಿಂಗ್‌ನಲ್ಲಿ ಕ್ಯಾಚ್ ಹಿಡಿದಿದ್ದಾಗ ಅಂಪೈರ್‌ಗಳಾದ ಆಲೀಮ್ ದರ್ ಮತ್ತು ಇಯಾನ್ ಗೌಲ್ಡ್ ಅದನ್ನು ನೋಬಾಲ್ ಎನ್ನುವ ಸಂಕೇತ ಸೂಚಿಸಿದರು ಎಂದು ಕಿಡಿಕಾರಿದ್ದಾರೆ. ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಸ್ಟಾರ್ ಬ್ಯಾಟ್ಸ್‌ಮೆನ್ ಮೊಹಮ್ಮದ್ ಮಹಮ್ಮದುಲ್ಲಾ ಅವರ ಕ್ಯಾಚ್ ಹಿಡಿದಿರುವುದರಲ್ಲೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಸ್ತಫಾ ಕಮಲ್ ರ ಹೇಳಿಕೆಯನ್ನು ಐಸಿಸಿ ಮುಖ್ಯಸ್ಥ ಡೇವ್ ರಿಚರ್ಡ್ಸನ್ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದು, ಈ ಹೇಳಿಕೆಯಲ್ಲಿ ಹುರುಳಿಲ್ಲ. ಅಲ್ಲದೆ ಕಮಲ್ ಅವರ ಹೇಳಿಕೆ ದುರದೃಷ್ಟಕರ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com