ಬಾಸ್ಕೆಟ್‌ಬಾಲ್ ಫೆಡರೇಷನ್‌ನಲ್ಲಿ ಭಿನ್ನಾಭಿಪ್ರಾಯ ಸ್ಫೋಟ

ಬಾಸ್ಕೆಟ್‌ಬಾಲ್ ಫೆಡರೇಷನ್‌
ಬಾಸ್ಕೆಟ್‌ಬಾಲ್ ಫೆಡರೇಷನ್‌

ಬೆಂಗಳೂರು: ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್(ಬಿಎಫ್‌ಐ)ನ ಪ್ರಧಾನ ಕಾರ್ಯದರ್ಶಿ ಅಜಯ್ ಸುದ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ, ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ)ಯಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.

ಬಿಎಫ್‌ಐನಲ್ಲಿನ ಭಿನ್ನಾಭಿಪ್ರಾಯ ಹಾಗೂ ಬಣಗಳ ನಡುವಿನ ಕಿತ್ತಾಟದ ಹಿನ್ನೆಲೆಯಲ್ಲಿ ಸುದ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ವಾರ್ಷಿಕ ಸಾಮಾನ್ಯ ಸಭೆಗೆ ಕೇವಲು 10 ದಿನ ಬಾಕಿ ಇರುವಾಗಲೇ ಬಿಎಫ್‌ಐನಲ್ಲಿ ಮತ್ತೆ ಭಿನ್ನಾಭಿಪ್ರಾ ಸ್ಫೋಟಗೊಂಡಿದೆ.

ವಾರ್ಷಿಕ ಸಾಮಾನ್ಯ ಸಭೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಲಾಗಿದ್ದು, ಒಂದರಲ್ಲಿ ಇದೇ ಮಾರ್ಚ್ 27ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗಿದೆ. ಮತ್ತೊಂದರಲ್ಲಿ ಮಾರ್ಚ್ 28ರಂದು ಫೆಡರೇಷನ್ ಕಪ್ ಸಮಯದಲ್ಲಿ ಪುಣೆಯಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.

2011ರ ವರೆಗೂ ದಿ.ಹರಿಶ್ ಶರ್ಮಾ ಅವರು ಫೆಡರೇಷನ್ ಕಾರ್ಯದರ್ಶಿಯಾಗಿದ್ದರು. ಆದರೆ ಅವರಿಗೆ ಬಿಎಫ್‌ಐ ಸಿಇಒ ಸ್ಥಾನವನ್ನು ಸೃಷ್ಠಿ ಮಾಡಿತ್ತು. ಇದು ಸರ್ಕಾರದ ಕ್ರೀಡಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿತ್ತು. ನಿಯಮಗಳ ಪ್ರಕಾರ, ಪದಾಧಿಕಾರಿಗಳು ಗರಿಷ್ಠ ಎಂಟು ವರ್ಷಗಳ ಕಾಲ ಅಧಿಕಾರಿದಲ್ಲಿಬರುದು ಮತ್ತು ಸಿಇಒ ಫೆಡರೇಷನ್ ಅಧ್ಯಕ್ಷ ಆರ್ ಗಿಲ್ ಅವರಿಗೆ ಉತ್ತರದಾಯಿಯಾಗಿರಲಿಲ್ಲ.

2012ರಲ್ಲಿ ಶರ್ಮಾ ಸಾವಿನ ನಂತರ ಅವರ ಪತ್ನಿ ರೂಪಮ್ ಶರ್ಮಾ ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದು, ಆ ಸ್ಥಾನವನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ ಈಗ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ ಅವರಿಗೆ ವಾರ್ಷಿಕ ಸಾಮನ್ಯ ಸಭೆಯ ಕಾರ್ಯದರ್ಶಿಯನ್ನಾಗಿ ಮಾಡಲು ಪಿಎಫ್‌ಐ ಮುಂದಾಗಿದೆ. ಇದಕ್ಕೆ ರೂಪಮ್ ಶರ್ಮಾ ಅವರು ಒಪ್ಪುತ್ತಿಲ್ಲ. ಅಲ್ಲದೆ ಹಿರಿಯ ಉಪಾಧ್ಯಕ್ಷ ಕರ್ನಾಟಕದ ಕೆ.ಗೋವಿಂದರಾಜ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ಈಗಾಗಲೇ ಮೂರು ಅವಧಿಗೆ ಅಧ್ಯಕ್ಷರಾಗಿರುವ ಆರ್‌ಎಸ್ ಗಿಲ್ ಅವರು ಅಧಿಕಾರದಿಂದ ಕೆಳಗಿಳಿಯಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com