ನರೈನ್‌ಗೆ ಆಡಲು ಅವಕಾಶ ನೀಡದಿದ್ದರೆ ಐಪಿಎಲ್‌ನಿಂದಲೇ ಕೆಕೆಆರ್ ಔಟ್?

ಕಳೆದ ಐಪಿಎಲ್​ನಲ್ಲಿ ಅನುಮಾನಸ್ಪದ ಬೌಲಿಂಗ್​ಶೈಲಿಗೆ ಗುರಿಯಾಗಿದ್ದ ವೆಸ್ಟ್ ಇಂಡೀಸ್ ನ ಸುನೀಲ್ ನರೈನ್ ಅವರನ್ನು ಎರಡನೇ ಸುತ್ತಿನ ಬೌಲಿಂಗ್ ಪರೀಕ್ಷೆಗೆ...
ಸುನೀಲ್ ನರೈನ್
ಸುನೀಲ್ ನರೈನ್

ಕೊಲ್ಕತಾ: ಕಳೆದ ಐಪಿಎಲ್​ನಲ್ಲಿ ಅನುಮಾನಸ್ಪದ ಬೌಲಿಂಗ್​ ಶೈಲಿಗೆ ಗುರಿಯಾಗಿದ್ದ ವೆಸ್ಟ್ ಇಂಡೀಸ್ ನ ಸುನೀಲ್ ನರೈನ್ ಅವರನ್ನು ಎರಡನೇ ಸುತ್ತಿನ ಬೌಲಿಂಗ್ ಪರೀಕ್ಷೆಗೆ ಒಳಪಡಿಸಲು ಬಿಸಿಸಿಐ ಮಾಡಿರುವ ನಿರ್ಧಾರವನ್ನು ಕೋಲ್ಕತಾ ನೈಟ್ ರೈಡರ್ಸ್ ಆಕ್ಷೇಪಿಸಿದೆ.

ಐಸಿಸಿಯಿಂದಲೇ ಓಕೆ ಎಂದು ಅನುಮತಿ ಬಂದ ಮೇಲೆ ಬಿಸಿಸಿಐ ಮತ್ತೊಮ್ಮೆ ಪರೀಕ್ಷೆ ಮಾಡುವುದರಲ್ಲಿ ಅರ್ಥವೇನಿದೆ ಎಂದು ಕೆಕೆಆರ್ ಪ್ರಶ್ನಿಸಿದೆ. ಅಷ್ಟೇ ಅಲ್ಲದೆ ಸಮಯ ಬಂದರೆ ಐಪಿಎಲ್ ಟೂರ್ನಿಯಿಂದ ಇಡೀ ತಂಡವೇ ಹೊರಬೀಳುತ್ತದೆ ಎಂದು ಕೆಕೆಆರ್ ತಂಡದ ಮೂಲಗಳು ಹೇಳುತ್ತಿವೆ.

ಅನುಮಾನಸ್ಪದ ಬೌಲಿಂಗ್ ಶೈಲಿಯಿಂದಾಗಿ ಹಲವಾರು ಟೂರ್ನಿಗಳಿಂದ ದೂರವಾಗಿದ್ದ ಸುನೀಲ್ ನರೈನ್ ಬೌಲಿಂಗ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಓಕೆ ಎಂಬ ಅಭಿಪ್ರಾಯ ಬಂದ ಮೇಲೆ ಬಿಸಿಸಿಐ ತನ್ನ ಹಠ ಮುಂದುವರಿಸುವುದು ಸರಿಯಲ್ಲ. ಹಾಗೂ ಬಿಸಿಸಿಐ ತನ್ನ ಧೋರಣೆಯನ್ನೇ ಮುಂದುವರೆಸಿದರೆ ತಾನು ನ್ಯಾಯಾಲಯದ ಮೆಟ್ಟಿಲು ಹೇರುವುದಾಗಿಯೂ ಕೋಲ್ಕತಾ ತಂಡ ಎಚ್ಚರಿಕೆ ನೀಡಿದೆ.

ಐಪಿಎಲ್ ಟೂರ್ನಿಯಲ್ಲಿ ಆಡುವ ಮುನ್ನ ಕೆಕೆಆರ್ ತಂಡದ ಸುನೀಲ್ ನರೈನ್ ಅವರು ಚೆನ್ನೈನ ಶ್ರೀರಾಮಚಂದ್ರ ಯೂನಿರ್ವಸಿಟಿಯಲ್ಲಿ ಬೌಲಿಂಗ್ ಪರೀಕ್ಷೆಗೆ ಒಳಪಡಬೇಕೆಂದು ಬಿಸಿಸಿಐ ಸೂಚಿಸಿದೆ.

ಐಪಿಎಲ್ ಟೂರ್ನಿ ವೇಳೆ ಸುನೀಲ್ ಬೌಲಿಂಗ್ ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ. ಆದರೆ, ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ವಿಂಡೀಸ್ ಬೌಲರ್ ನ ಬೌಲಿಂಗ್ ಶೈಲಿ ಅಕ್ರಮ ಎಂದು ಯಾಕೆ ಅನಿಸಿತು..? ಸುನೀಲ್ ನರೈನ್ ಅವರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವೆಂಕಿ ಮೈಸೂರು ಮಾಲೀಕತ್ವದ ಕೆಕೆಆರ್ ಆರೋಪಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com