ಶ್ರೀನಿವಾಸನ್‌ರೊಂದಿಗೆ ಮನಸ್ತಾಪ: ಐಸಿಸಿ ಅಧ್ಯಕ್ಷ ಮುಸ್ತಾಫ ರಾಜಿನಾಮೆ

ತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯ ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರೊಂದಿಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಐಸಿಸಿ ಅಧ್ಯಕ್ಷ,...
ಮುಸ್ತಾಫ
ಮುಸ್ತಾಫ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯ ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರೊಂದಿಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಐಸಿಸಿ ಅಧ್ಯಕ್ಷ, ಬಾಂಗ್ಲಾ ದೇಶದ ಮುಸ್ತಾಫ ಕಮಲ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಗಳಿಸಿದ ಬಳಿಕ ವಿಜೇತ ತಂಡಕ್ಕೆ ವಿಶ್ವಕಪ್ ಪ್ರಶಸ್ತಿ ವಿತರಿಸಲು ತನಗೆ ಆಡಳಿತ ಮಂಡಳಿ ಅವಕಾಶ ನೀಡಲಿಲ್ಲ ಎಂದು ಕಮಲ್ ಹೇಳಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀನಿವಾಸನ್ ಅವರು 'ವಿಶ್ವಕಪ್‌' ಅನ್ನು ವಿಜೇತ ತಂಡಕ್ಕೆ ಹಸ್ತಾಂತರಿಸಿದ್ದರು. ಆದರೆ ಐಸಿಸಿಯ ಜನವರಿ 2015ರ ತಿದ್ದುಪಡಿ ಪ್ರಕಾರ, ಐಸಿಸಿ ಅಧ್ಯಕ್ಷರು ಪ್ರಶಸ್ತಿಯನ್ನು ವಿತರಿಸಬೇಕು ಎಂಬ ಆದೇಶವಿದೆ.

ಭಾರತ-ಬಾಂಗ್ಲಾದೇಶ ಕ್ವಾರ್ಟರ್‌ಫೈನಲ್‌ ಪಂದ್ಯದದಲ್ಲಿ ಬಾಂಗ್ಲಾ ಸೋತ ನಂತರ ಪ್ರತಿಕ್ರಿಯಿಸಿದ್ದ ಕಮಾಲ್‌, ಪಂದ್ಯದ ಅಂಪೈರಿಂಗ್‌ನಲ್ಲಿ ಗುಣಮಟ್ಟವಿರಲಿಲ್ಲ. ಪಂದ್ಯವನ್ನು ಪೂರ್ವನಿರ್ಧರಿಸಿದಂತೆ ಕಂಡುಬಂತು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಅಲ್ಲದೆ ಐಸಿಸಿ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು. ಇದರ ಪರಿಣಾಮ ಅವರನ್ನು ವಿಶ್ವಕಪ್ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರವಿಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com