ಗೌರವ ಡಾಕ್ಟರೇಟ್ ಸ್ವೀಕರಿಸಿದ ನಡಾಲ್

ಖ್ಯಾತ ಸ್ಪ್ಯಾನಿಶ್ ಟೆನಿಸ್ ಆಟಾಗರ, ವಿಶ್ವದ ನಾಲ್ಕನೇ ರ್ಯಾಂಕನಲ್ಲಿರುವ ರಫೇಲ್ ನಡಾಲ್ ಅವರು ಮ್ಯಾಡ್ರಿಡ್ ನ ಯುರೋಪಿಯನ್ ವಿಶ್ವವಿದ್ಯಾಲಯದಿಂದ
ರಫೇಲ್ ನಡಾಲ್
ರಫೇಲ್ ನಡಾಲ್
Updated on

ಮ್ಯಾಡ್ರಿಡ್: ಖ್ಯಾತ ಸ್ಪ್ಯಾನಿಶ್ ಟೆನಿಸ್ ಆಟಾಗರ, ವಿಶ್ವದ ನಾಲ್ಕನೇ ರ್ಯಾಂಕನಲ್ಲಿರುವ ರಫೇಲ್ ನಡಾಲ್ ಅವರು ಮ್ಯಾಡ್ರಿಡ್ ನ ಯುರೋಪಿಯನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ಈ ಸಮಾರಂಭದಲ್ಲಿ ನಡಾಲ್ ನೀಡಿದ ಭಾಷಣದಲ್ಲಿ "ಮೌಲ್ಯಗಳು ಮತ್ತು ಕುಟುಂಬ" ಜೀವನವನ್ನು ಮತ್ತು ವೃತ್ತಿಯನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಮೂಲ ತತ್ತ್ವಗಳು ಎಂದು ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿಮಾಡಿದೆ.

"ನನ್ನನ್ನು ಉತ್ತಮ ಆಟಗಾರನಷ್ಟೇ ಅಲ್ಲ ಉತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸಿದ ಈ ಕಂಬಗಳಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿರುವುದು" ಎಂದಿದ್ದಾರೆ ನಡಾಲ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com