ಖೇಲ್ ರತ್ನಕ್ಕೆ ವಿಕಾಸ್, ಗಿರೀಶ್ ಹೆಸರು ಶಿಫಾರಸು

ರಾಜ್ಯದ ಕ್ರೀಡಾಳುಗಳಾದ ವಿಕಾಸ್ ಗೌಡ (ಡಿಸ್ಕಸ್ ತ್ರೋ) ಹಾಗೂ ಎಚ್.ಎನ್. ಗಿರೀಶ (ಪ್ಯಾರಾ ಅಥ್ಲೆಟಿಕ್ಸ್) ಅವರಿಗೆ ಪ್ರತಿಷ್ಠಿತ ರಾಜೀವ್ ಗಾಂಧಿ...
ವಿಕಾಸ್ ಗೌಡ
ವಿಕಾಸ್ ಗೌಡ

ನವದೆಹಲಿ: ರಾಜ್ಯದ ಕ್ರೀಡಾಳುಗಳಾದ ವಿಕಾಸ್ ಗೌಡ (ಡಿಸ್ಕಸ್ ತ್ರೋ) ಹಾಗೂ ಎಚ್.ಎನ್.
ಗಿರೀಶ (ಪ್ಯಾರಾ ಅಥ್ಲೆಟಿಕ್ಸ್) ಅವರಿಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡುವಂತೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ (ಎಎಫ್ಐ) ಕೇಂದ್ರ ಕ್ರೀಡಾ ಇಲಾಖೆಗೆ ಶಿಫಾರಸು ಮಾಡಿದೆ.

ಅಲ್ಲದೆ, ಕನ್ನಡದ ಓಟಗಾರ್ತಿ ಎಂ.ಆರ್. ಪೂವಮ್ಮ ಅವರಿಗೆ ಅರ್ಜುನ ಪ್ರಶಸ್ತಿ ನೀಡುವಂತೆ ಅದು ಸಚಿವಾಲಯವನ್ನು ಕೋರಿದೆ. ಪೂವಮ್ಮ ಜೊತೆಗೆ ಟ್ರಿಪಲ್ ಜಂಪರ್ ಅರ್ಪಿಂದರ್ ಸಿಂಗ್, ಓಟಗಾರ್ತಿ ಒ.ಪಿ. ಜೈಶಾ ಹಾಗೂ ಸೀಮಾ ಅವರಿಗೂ ಅರ್ಜುನ ಪ್ರಶಸ್ತಿ ನೀಡುವಂತೆ ಕೇಂದ್ರವನ್ನು ಎಎಫ್ಐ ಕೇಳಿಕೊಂಡಿದೆ.

ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಎಚ್.ಎನ್. ಗಿರೀಶ ಜೊತೆಗೆ, ದೇವೇಂದ್ರ ಝಝಾರಿಯಾ ಅವರಿಗೂ ಖೇಲ್ ರತ್ನ ಪಶಸ್ತಿಗಾಗಿ ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ, ಮಹಿಳೆಯ ಡಿಸ್ಕರ್ ತ್ರೋ ವಿಭಾಗದಲ್ಲಿ ಗಣನೀಯ ಸಾಧನೆ ಮಾಡಿರುವ ಸೀಮಾ ಪೂನಿಯಾ ಅವರಿಗೂ ಖೇಲ್ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ. 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಸೀಮಾ ಅವರು ಚಿನ್ನದ ಪದಕ ಗೆದ್ದಿದ್ದರು.

ವಿಕಾಸ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರಲ್ಲದೆ, 2014ರ ಇಂಚಿಯಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಗೌರವ ಪಡೆದಿದ್ದರು. ಮಹಿಳೆಯರ ಡಿಸ್ಕಸ್ ತ್ರೋ ವಿಭಾಗದಲ್ಲಿ ಗಣನೀಯ ಸಾಧನೆ ಮಾಡಿರುವ ಸೀಮಾ ಪೂನಿಯಾ ಅವರಿಗೂ ಖೇಲ್ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸೀಮಾ, ಬೆಳ್ಳಿ ಪದಕದ ಗೌರವ ತಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com