ಕ್ರೀಡಾಳು ಸಾವು: ಸಂಸತ್ ನಲ್ಲಿ ಪ್ರತಿಧ್ವನಿ

ಕೇರಳದ ಅಲೆಪ್ಪಿಯ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ತರಬೇತಿ ಕೇಂದ್ರದಲ್ಲಿ ಮಹಿಳಾ ಯುವ ಕ್ರೀಡಾಳು ಆತ್ಮಹತ್ಯೆ ಮಾಡಿಕೊಂಡ
ಸಂಸತ್
ಸಂಸತ್

ನವದೆಹಲಿ: ಕೇರಳದ ಅಲೆಪ್ಪಿಯ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ತರಬೇತಿ ಕೇಂದ್ರದಲ್ಲಿ ಮಹಿಳಾ ಯುವ ಕ್ರೀಡಾಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಸತ್ ನಲ್ಲಿ ಪ್ರತಿಧ್ವನಿಸಿತು.
ಸಾಯ್ ನ ಮಹಾ ನಿರ್ದೇಶಕರನ್ನು  ಹುದ್ದೆಯಿಂದ ತೆಗೆದುಹಾಕಬೇಕು ಹಾಗೂ ತರಬೇತಿ ಕೇಂದ್ರಗಳಲ್ಲಿ ಮಹಿಳಾ ಸುರಕ್ಷತೆಗೆ ಅನುಕೂಲವಾಹುವಂತ ಕಠಿಣ ಕಾನೂನನ್ನು ಜಾರಿಗೊಳಿಸಬೇಕೆಂದು ಸಂಸದರು ಸರ್ಕಾರವನ್ನು ಒತ್ತಾಯಿಸಿದರು.
ಲೋಕಸಭೆಯಲ್ಲಿ ಈ ಬಗ್ಗೆ ದನಿ ಎತ್ತಿದ ಬಿಜೆಪಿಯ ಪ್ರಹ್ಲಾದ್ ಪಟೇಲ್ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ಇರುವ ಸರ್ವಾಧಿಕಾರಿ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು. ಹಾಗೂ ವಿದ್ಯಾರ್ಥಿಗಳು ನಿರುಮ್ಮಳವಾಗಿ ತರಬೇತಿ ಪಡೆಯುವಂತೆ ಕಾನೂನು ರೂಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನ ಪ್ರಮೋದ್ ತಿವಾರಿ, ರಾಜೀವ್ ಶುಕ್ಲಾ, ಮಾಜಿ ಕೇಂದ್ರ ಸಚಿವ ಎ.ಕೆ ಆ್ಯಂಟನಿ ಇದಕ್ಕೆ ದನಿಗೂಡಿಸಿದರು.
ಬುಧವಾರ ಅಲೆಪ್ಪಿಯ ಸಾಯ್ ಕೇಂದ್ರದಲ್ಲಿ ನಾಲ್ವರು ಬಾಲಕಿಯರು ಆತ್ಮಹತ್ಯೆಗೆ ಯತ್ನಿಸಿದ್ದರು. ಇವರಲ್ಲಿ ಅಪರ್ಣಾ ಎಂಬ ಅಥ್ಲೀಟ್ ಸಾವನ್ನಪ್ಪಿದ್ದಳು.
ಚೇತರಿಕೆ: ಇತರ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಮೂವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
5 ಲಕ್ಷ ಪರಿಹಾರ: ಅಲೆಪ್ಪಿಯ ಸಾಯ್ ಕೇಂದ್ರದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡ ಯುವ ಕ್ರೀಡಾಳು ಕುಟುಂಬಕ್ಕೆ ಸಾಯ್ ವತಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಶುಕ್ರವಾರ ಅಪರ್ಣಾ ಮನೆಗೆ ಭೇಟಿ ನೀಡಿದ ಸಾಯ್ ನಿರ್ದೇಶಕ ಇಂಜೆಟಿಶ್ರೀನಿವಾಸ್ ಕುಟುಂಬ ಸದಸ್ಯರಿಗೆ ಪರಿಹಾರದ ಚೆಕ್ ವಿತರಿಸಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com