ಭಾರತ ತಂಡದ ಕೋಚ್ ಆಗಲು ನಿರಾಕರಿಸಿದ ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್

ಭಾರತ ಮತ್ತು ಇಂಗ್ಲೆಂಡ್ ತಂಡಗಳ ಪೈಕಿ ಯಾವುದಾದರೂ ಒಂದು ತಂಡಕ್ಕೆ ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್ ಕೋಚ್ ಆಗಬಹುದೆಂಬ ಸುದ್ದಿ ಕೇಳಿಬಂದಿತ್ತು...
ಜಸ್ಟಿನ್ ಲ್ಯಾಂಗರ್
ಜಸ್ಟಿನ್ ಲ್ಯಾಂಗರ್

ಸಿಡ್ನಿ: ಭಾರತ ಮತ್ತು ಇಂಗ್ಲೆಂಡ್ ತಂಡಗಳ ಪೈಕಿ ಯಾವುದಾದರೂ ಒಂದು ತಂಡಕ್ಕೆ ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್ ಕೋಚ್ ಆಗಬಹುದೆಂಬ ಸುದ್ದಿ ಕೇಳಿಬಂದಿತ್ತು. ಆದರೆ ಲ್ಯಾಂಗರ್ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ(ವಾಕಾ)ಯೊಂದಿಗೆ 2 ವರ್ಷದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಟೀಂ ಇಂಡಿಯಾ ತಂಡದ ಕೋಚ್ ಸ್ಥಾನ ಅಲಂಕರಿಸಲು ಬಹುತೇಕ ಎಲ್ಲ ಕೋಚ್ ಗಳು ಹವಣಿಸುತ್ತಾರೆ. ಆದರೆ, ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗ್ ಮಾತ್ರ ಇದಕ್ಕೆ ಭಿನ್ನವಾಗಿದ್ದು, ಟೀಂ ಇಂಡಿಯಾದ ಕೋಚಿಂಗ್ ಜವಾಬ್ದಾರಿ ವಹಿಸಿಕೊಳ್ಳಲು ಲ್ಯಾಂಗರ್ ನಿರಾಕರಿಸಿದ್ದಾರೆ.

ಭಾರತ ಅಥವಾ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಸ್ಥಾನ ವಹಿಸಿಕೊಳ್ಳುವುದು ನಿಜಕ್ಕೂ ಅದೃಷ್ಟ ಎಂದು ಅಭಿಪ್ರಾಯಪಟ್ಟಿರುವ ಲ್ಯಾಂಗರ್, ತನ್ನ ಕೌಟುಂಬಿಕ ಕಾರಣದಿಂದಾಗಿ ದೇಶ ಬಿಟ್ಟು ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪರ 105 ಟೆಸ್ಟ್ ಪಂದ್ಯಗಳನ್ನಾಡಿರುವ ಜಸ್ಟಿನ್ ಲ್ಯಾಂಗರ್ 7696 ರನ್ ಗಳಿಸಿದ್ದಾರೆ. 23 ಶತಕ ಸಿಡಿಸಿರುವ ಅವರು 45.27 ರನ್ ಸರಾಸರಿ ಹೊಂದಿದ್ದರು. ಎಂಟು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಲ್ಯಾಂಗರ್ ನಿವೃತ್ತಿ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com