ಇಂದು ಸೋತವರು ಪ್ಯಾಕ್ ಅಪ್

ಐಪಿಎಲ್ ಎಂಟನೇ ಆವೃತ್ತಿಯ ಲೀಗ್ ಹಾದಿಯಲ್ಲಿ ಒಂದೇ ರೀತಿಯ ಸಿಹಿ ಮತ್ತು ಕಹಿ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್...
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್

ಪುಣೆ: ಐಪಿಎಲ್ ಎಂಟನೇ ಆವೃತ್ತಿಯ ಲೀಗ್ ಹಾದಿಯಲ್ಲಿ ಒಂದೇ ರೀತಿಯ ಸಿಹಿ ಮತ್ತು ಕಹಿ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಪ್ರಶಸ್ತಿ ಗೆದ್ದುಕೊಳ್ಳುವ ಆಸೆ ಜೀವಂತವಾಗಿರಿಸಿಕೊಳ್ಳಲು ಪರಸ್ಪರ ರೋಚಕ ಕದನಕ್ಕೆ ಸಜ್ಜಾಗಿವೆ.

ಒಟ್ಟು 8 ತಂಡಗಳ ಲೀಗ್ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಲಾ 16 ಅಂಕಗಳಿಸಿ ಸಮಗೌರವ ಸಾಧಿಸಿದ್ದವು. ಈ ಎರಡೂ ತಂಡಗಳು ತಲಾ 7ರಲ್ಲಿ ಜಯ, 5ರಲ್ಲಿ ಸೋಲಿನ -ಫಲಿತಾಂಶ ಕಂಡಿವೆ. ಉಳಿದ ಎರಡೆರೆಡು ಪಂದ್ಯಗಳು ಮಳೆಗೆ ಆಹುತಿಯಾಗಿದ್ದವು. ಉತ್ತಮ ರನ್ ಸರಾಸರಿ ಹಿನ್ನೆಲೆಯಲ್ಲಿ ಬೆಂಗಳೂರು ತಂಡಕ್ಕೆ ಮೂರನೇ ಸ್ಥಾನ ಲಭಿಸಿದರೆ, ರಾಜಸ್ಥಾನ ರಾಯಲ್ಸ್‍ಗೆ ನಾಲ್ಕನೇ ಸ್ಥಾನದ ಗೌರವ ದಕ್ಕಿತ್ತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಪೈಕಿ ಗೆದ್ದವರು, ಮುಂದಡಿ ಇಡಲಿದ್ದಾರೆ. ಈ ಪಂದ್ಯದ ವಿಜೇತರು ಮೇ 22ರಂದು ರಾಂಚಿಯಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ ನಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ
ಸೆಣಸಲಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಸೋತವರು ಮಾತ್ರ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಗಂಟುಮೂಟೆ ಕಟ್ಟಬೇಕಾಗುತ್ತದೆ.

ಲೀಗ್ ಹಂತದಲ್ಲಿ ಪರಸ್ಪರ ಎದುರಿಸಿದ ಎರಡು ಪಂದ್ಯಗಳ ಪೈಕಿ ಆರ್‍ಸಿಬಿ ಒಂದರಲ್ಲಿ ಗೆಲವು ದಾಖಲಿಸಿದ್ದರೆ, ಮತ್ತೊಂದು ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದುಗೊಂಡಿತ್ತು. ಲೀಗ್ ಹಂತದಲ್ಲಿ ಆರ್‍ಸಿಬಿ ನೀಡಿರುವ ಏಟಿನಿಂದಾಗಿ ಒತ್ತಡಕ್ಕೆ ಸಿಲುಕಿರುವ ರಾಜಸ್ಥಾನ ರಾಯಲ್ಸ್, ಎಲಿಮಿನೇಟರ್ ಸುತ್ತಿನಲ್ಲಿ ಅದಕ್ಕೆ ತಕ್ಕ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿದೆ.

ಆರ್ ಸಿ ಬಿಗೆ `ತ್ರಿ'ಶಕ್ತಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಶಕ್ತಿ ಎಂದರೆ ಅಗ್ರಕ್ರಮಾಂಕದ ಮೂವರು ದಾಂಡಿಗರು. ಆರಂಭಿಕರಾದ ಕ್ರಿಸ್ ಗೇಯ್ಲ್ ಮತ್ತು ವಿರಾಟ್ ಕೊಹ್ಲಿ ಹಾಗೂ ಮೂರನೇ ಕ್ರಮಾಂಕದಲ್ಲಿ ಕ್ರೀಸ್‍ಗೆ ಇಳಿಯುವ ಎಬಿ ಡಿವಿಲಿಯರ್ಸ್. ಈ ಮೂವರೂ ಬ್ಯಾಟ್ಸ್ ಮನ್ ಗಳು ಎಂತಹ ಕಠಿಣ ಸಂದರ್ಭದಲ್ಲೂ ಸಹ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಸಾಮರ್ಥ್ಯವಂತರು. ಹಾಗಾಗಿ, ಮೊದಲಿಗೆ ಈ ಮೂವರು ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವುದೇ ರಾಜಸ್ಥಾನ ಆಟಗಾರರಿಗೆ ದೊಡ್ಡ ಸವಾಲಿನ ಕೆಲಸ.

ಕೊಹ್ಲಿ (481ರನ್), ಡಿವಿಲಿಯರ್ಸ್ (446ರನ್) ಮತ್ತು ಗೇಯ್ಲ್ (423ರನ್) ಈವರೆಗೆ ತಲಾ 14 ಪಂದ್ಯಗಳನ್ನಾಡಿದ್ದು, 400ಕ್ಕಿಂತಲೂ ಹೆಚ್ಚು ರನ್ ಕಲೆಹಾಕಿದ್ದಾರೆ. ಈ ಪೈಕಿ ಡಿವಿಲಿಯರ್ಸ್ ಮತ್ತು ಗೇಯ್ಲ್ ಶತಕದ ಸಾಧನೆಯನ್ನೂ ಮಾಡಿದ್ದಾರೆ.
ಹಾಗೆಯೇ ಬೌಲಿಂಗ್ ವಿಭಾಗ ಕೂಡ ಅಷ್ಟೇ ಅಪಾಯಕಾರಿಯಾಗಿದೆ. ವಿಶ್ವಕಪ್‍ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ್ದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 11 ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದಾರೆ. ಸ್ಪಿನ್ನರ್ ಚಾಹಲ್ 13 ಪಂದ್ಯಗಳಿಂದ 19 ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಇನ್ನು ಡೇವಿಡ್ ವೈಸ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ಎಸ್. ಅರವಿಂದ್ ಕೂಡ ಉತ್ತಮ ಬೌಲರ್‍ಗಳೇ. ಈ ದಾಳಿಯನ್ನು ಪುಡಿ ಗಟ್ಟುವುದು ರಾಜಸ್ಥಾನ ಆಟಗಾರರಿಗೆ ಸುಲಭವಾದ ಸವಾಲಲ್ಲ.

ಹಾಗೆಂದು, ರಾಯಲ್ಸ್ ತಂಡದಲ್ಲೂ ಸಿಡಿಯುವ ಬ್ಯಾಟ್ಸ್ ಮನ್ ಗಳು ಮತ್ತು ಕರಾರುವಾಕ್ ದಾಳಿಕಾರರಿಗೆ ಕೊರತೆಯಿದೆ ಎಂದೇನಲ್ಲ. ಲೀಗ್‍ನ ಕೊನೆಯ ಪಂದ್ಯದಲ್ಲಿ ಆರಂಭಿಕ ಶೇನ್ ವ್ಯಾಟ್ಸನ್, ಅಬ್ಬರದ ಶತಕ ಸಿಡಿಸಿದ್ದು ನೋಡಿದರೆ, ಎದುರಾಳಿಗರು ಬೆಚ್ಚಿ ಬೀಳಬೇಕು. ಕೇವಲ 59 ಎಸೆತಗಳನ್ನು ಎದುರಿಸಿದ್ದ ವ್ಯಾಟ್ಸನ್, 9 ಬೌಂಡರಿ, 5 ಸಿಕ್ಸರ್‍ಗಳ ನೆರವಿನಿಂದ ಅಜೇಯ 104 ರನ್ ಚಚ್ಚಿದ್ದರು. ಇವರಿಗೆ ಉತ್ತಮ ಆರಂಭಿಕ ಜೊತೆಗಾರನಾಗಿರುವ ರಹಾನೆ ಅದ್ಭುತ -ಫಾರ್ಮ್‍ನಲ್ಲಿದ್ದಾರೆ. ಸದ್ಯ ರಹಾನೆ (13 ಪಂದ್ಯಗಳಿಂದ 498 ರನ್) ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಸನ್‍ರೈಸರ್ಸ್ ಹೈದರಾಬಾದ್‍ನ ಡೇವಿಡ್ ವಾರ್ನರ್ (562ರನ್) ಇದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ನಾಯಕ ಸ್ಟೀವನ್ ಸ್ಮಿತ್, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್, ಬಿನ್ನಿ, ಕರುಣ್ ನಾಯರ್ ಭರವಸೆದಾಯಕರು. ಬೌಲಿಂಗ್‍ನಲ್ಲಿ ಮೊರಿಸ್, ಫಾಲ್ಕನರ್, ವ್ಯಾಟ್ಸನ್, ಬಿನ್ನಿ, ಕುಲಕರ್ಣಿ ಮೇಲೂ ನಂಬಿಕೆ ಇಡಬಹುದು. ಯಾರಾದರೂ ಕೈಕೊಟ್ಟರೆ, ಮತ್ತೊಬ್ಬರು ಸಾಥ್ ನೀಡುವುದು ಈ ತಂಡದಲ್ಲಿನ ಗಮನ ಸೆಳೆಯುವ ಅಂಶ. ಒಟ್ಟಾರೆಯಾಗಿ, ಕೇವಲ ಒಬ್ಬ ಆಟಗಾರನ ಮೇಲೆ ನಂಬಿಕೆ ಇಡದೇ, ಸಾಂಕಶಕ್ತಿಯ ಪ್ರದರ್ಶನದ ಮೂಲಕವೇ ಯಶಸ್ಸು ಕಂಡು ಕೊಳ್ಳುವ ರಾಜಸ್ಥಾನ ರಾಯಲ್ಸ್‍ಗೆ ಬೆಂಗಳೂರು ತಂಡ ಯಾವ ರೀತಿಯ ಸವಾಲು ಒಡ್ಡಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಒಟ್ಟಿನಲ್ಲಿ ಈ ಪಂದ್ಯದಲ್ಲಿ ಇಬ್ಬರಿಗೂ ಗೆಲ್ಲುವ ಅವಕಾಶಗಳಿದ್ದು, ಈ ಅವಕಾಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಜಸ್ಥಾನ ರಾಯಲ್ಸ್
ಸ್ಥಳ: ಪುಣೆ, ಪಂದ್ಯ ಆರಂಭ: ರಾತ್ರಿ 8 ಗಂಟೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com