ಎಫ್ ಐ ಎಚ್ ವಿಶ್ವ ಹಾಕಿ ಲೀಗ್
ಎಫ್ ಐ ಎಚ್ ವಿಶ್ವ ಹಾಕಿ ಲೀಗ್

ವಿಶ್ವ ಹಾಕಿ ಲೀಗ್ ಗೆ ಭಾರತ ಮಹಿಳಾ ತಂಡ

ಬೆಲ್ಜಿಯಂ ನ ಆಂಟ್ವರ್ಪ್ ನಲ್ಲಿ ಜೂನ್ 20 ರಿಂದ ಜುಲೈ 4 ರವರೆಗೆ ನಡೆಯಲಿರುವ ಎಫ್ ಐ ಎಚ್ ವಿಶ್ವ ಹಾಕಿ ಲೀಗ್ ಸೆಮಿ ಫೈನಲ್ ಸುತ್ತಿನ ಸಮರಕ್ಕೆ ಅನುಭವಿ ಆಟಗಾರ್ತಿ....

ನವದೆಹಲಿ: ಬೆಲ್ಜಿಯಂ ನ ಆಂಟ್ವರ್ಪ್ ನಲ್ಲಿ ಜೂನ್ 20 ರಿಂದ ಜುಲೈ 4 ರವರೆಗೆ ನಡೆಯಲಿರುವ ಎಫ್ ಐ ಎಚ್ ವಿಶ್ವ ಹಾಕಿ ಲೀಗ್ ಸೆಮಿ ಫೈನಲ್ ಸುತ್ತಿನ ಸಮರಕ್ಕೆ ಅನುಭವಿ ಆಟಗಾರ್ತಿ ರಿತು ರಾಣಿ ನೇತೃತ್ವದಲ್ಲಿ 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಮಹತ್ವದ ಟೂರ್ನಿಗಾಗಿ ಸೋಮವಾರ ಹಾಕಿ ಇಂಡಿಯಾ ,ಮಹಿಳಾ ತಂಡದ ಪಟ್ಟಿ ಪ್ರಕಟಿಸಿದ್ದು, ದೀಪಿಕಾ ಅವರು ಉಪನಾಯಕಿಯಾಗಿದ್ದಾರೆ.

ಭಾರತದ ಆಟಗಾರ್ತಿಯರು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂ. 20 ರಂದು ನಡೆಯಲಿರುವ ಆತಿಥೇಯ ಬೆಲ್ಜಿಯಂ ವಿರುದ್ಧದ ಪಂದ್ಯದೊಂದಿಗೆ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.ಈ ಗುಂಪಿನಲ್ಲಿ ಭಾರತದ ಮಹಿಳೆಯರು ಬೆಲ್ಜಿಯಂ ಅಲ್ಲದೇ ವಿಶ್ವದ ಎರಡನೇ ಕ್ರಮಾಂಕದ ಆಸ್ಟ್ರೇಲಿಯಾ ನ್ಯೂಜಿಲೆಂಡ್ ಮತ್ತು ಪೊಲೆಂಡ್ ತಂಡಗಳ ಜೊತೆ ಸ್ಥಾನ ಹೊಂದಿದ್ದಾರೆ.

ಎ ಗುಂಪಿನಲ್ಲಿ ಹಾಲೆಂಡ್ ಕೊರಿಯಾ, ಜಪಾನ್, ಇಟಲಿ ಮತ್ತು ಅಜರ್ ಬೈಜಾನ್ ತಂಡಗಳಿದ್ದು ಪರಸ್ಪರ ಒಂದು ಬಾರಿ ಸೆಣಸಲಿವೆ. ತಂಡದ ನೂತನ ಮುಖ್ಯ ಕೋಚ್ ಮಥಿಯಾಸ್ ಆರೆನ್ಸ್ ಗರಡಿಯಲ್ಲಿ ಪಳಗಿರುವ ಭಾರತದ ಆಟಗಾರ್ತಿಯರು ಅಗ್ರ ನಾಲ್ಕರಲ್ಲಿ ಸ್ಥಾನ ಹೊಂದುವ ಮೂಲಕ ಎಫ್ ಐ ಎಚ್ ಹಾಕಿ ವಿಶ್ವ ಲೀಗ್ ಫೈನಲ್ ಸುತ್ತಿಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ. ಅಲ್ಲದೆ, 2016ರ ರಿಯೋ ಒಲಂಪಿಕ್ಸ್ ಗೂ ಪ್ರವೇಶ ಪಡೆಯುವ ಆಶಾ ಭಾವನೆಯಲ್ಲಿದ್ದಾರೆ.

ಆಟಗಾರ್ತಿಯರು ತಮ್ಮ ಸಮಸ್ಯೆ ಮತ್ತು ದೌರ್ಬಲ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ವಿಶ್ವ ಹಾಕಿ ಲೀಗ್ ಸೆಮಿಫೈನಲ್ ನಲ್ಲಿ ಅಗ್ರ ಕ್ರಮಾಂಕದ ತಂಡಗಳನ್ನು ಎದುರಿಸಬೇಕಾಗಿದೆ. ಹಾಗೆಂದು ನಮ್ಮ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ. ಕಠಿಣ ಪರಿಶ್ರಮದ ಮೂಲಕ ಉತ್ತಮ ರೀತಿಯ ಕಲಿಕೆಯಲ್ಲಿ ಪ್ರತಿಯೊಬ್ಬ ಸದಸ್ಯರು ತೊಡಗಿದ್ದಾರೆ ಎಂದು ಮಥಿಯಾಸ್ ಹೇಳಿದ್ದಾರೆ.

ಭಾರತದ ಮಹಿಳಾ ತಂಡ
ಗೋಲ್ ಕೀಪರ್ : ಸವಿತಾ, ರಜನಿ, ಎತಿಮರ್ಪು,
ರಕ್ಷಣೆ:
ದೀಪ್ ಗ್ರೇಸ್, ನಮಿತಾ ಟೊಪ್ಟೊ, ಸುಶೀಲಾ ಚಾನು.
ಸಂಪರ್ಕ: ರಿತು ರಾಣಿ,(ನಾಯಕಿ) ಲಿಲಿಮಾ ಮಿನ್ಜ್, ಲಿಲಿ ಚಾನು, ನವಜೋತ್ ಕೌರ್, ಮೋನಿಕಾ, ರೇಣುಕಾ ಯಾದವ್,
ಮುನ್ಪಡೆ: ರಾಣಿ, ಪೂನಂ ರಾಣಿ, ವಂದನಾ, ಅನುರಾಧಾ ದೇವಿ, ಸೌಂದರ್ಯ ಯೆಂದೆಲಾ



Related Stories

No stories found.

Advertisement

X
Kannada Prabha
www.kannadaprabha.com