ಫ್ರೆಂಚ್ ಓಪನ್: ಸಾನಿಯಾ, ಪೇಸ್, ಬೋಪಣ್ಣ ಮುನ್ನಡೆ

ಫ್ರೆಂಚ್ ಓಪನ್ ಟೆನಿಸ್ ಡಬಲ್ಸ್ ಪಂದ್ಯದಲ್ಲಿ ಭಾರತದ ಕ್ರೀಡಾಪಟುಗಳು ಮುನ್ನಡೆ ಸಾಧಿಸಿದ್ದಾರೆ. ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ವಿಶ್ವ ನಂ. 1 ಸಾನಿಯಾ ಮಿರ್ಜಾ...
ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ (ಸಂಗ್ರಹ ಚಿತ್ರ- ಕೃಪೆ -ಎಎಫ್ ಪಿ)
ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ (ಸಂಗ್ರಹ ಚಿತ್ರ- ಕೃಪೆ -ಎಎಫ್ ಪಿ)

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್  ಡಬಲ್ಸ್ ಪಂದ್ಯದಲ್ಲಿ ಭಾರತದ ಕ್ರೀಡಾಪಟುಗಳು ಮುನ್ನಡೆ ಸಾಧಿಸಿದ್ದಾರೆ. ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ವಿಶ್ವ ನಂ. 1  ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಜರ್ಮನಿಯ ಜೂಲಿಯಾ ಜಾರ್ಜ್-ಚೆಕ್ ರಿಪಬ್ಲಿಕ್‌ನ ಬೋರ್‌ಬಾರ್ ಕ್ರೆಜಿಕೋವಾ ಜೋಡಿಯನ್ನು ಅನಾಯಾಸವಾಗಿ ಪರಾಭವಗೊಳಿಸಿದಾಗ, ಕಠಿಣ ಪ್ರಯತ್ನದ ಮೂಲಕ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಪೇಸ್ ಮತ್ತು ಕೆನಡಾದ ಡಾನಿಯಲ್ ನೆಸ್ಟ್‌ರ್ ಜೋಡಿ  ಆಸ್ಟ್ರೇಲಿಯಾದ ಜೋಡಿಗಳಾದ ಜೇಮ್ಸ್ ಡಕ್ವರ್ತ್ -ಕ್ರಿಸ್ ಗುಸಿಯೋನ್ ಜೋಡಿಯನ್ನು 6-2, 5-7 , 7-5  ಅಂತರದಲ್ಲಿ  ಪರಾಭವಗೊಳಿಸಿದೆ. ಅದೇ ವೇಳೆ ರೋಹನ್ ಬೋಪಣ್ಣ ಮತ್ತು ರುಮಾನಿಯಾದ ಪ್ಲೋರಿನ್ ಮೆರ್ಜಿಯಾ ಜೋಡಿ 5-7, 6-3, 6-4 ಅಂತರದಲ್ಲಿ ಸೆರ್ಬಿಯಾ ಜೋಡಿಯಾ ಫಿಲಿಪ್ ಕ್ರಿಜಿನೋವಿಚ್- ವಿಕ್ಟರ್  ಟ್ರೊಯ್ಕಿ ಜೋಡಿಯನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿದೆ.

ಇತ್ತ ಮಹೇಶ್ ಭೂಪತಿ- ನಿಕ್  ಕಿರ್‌ಗೋಯಿಸ್ ಜೋಡಿ ಮೊದಲನೇ ಪಂದ್ಯದಲ್ಲಿ ಪರಾಭವಗೊಂಡು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.  ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ರೋಜರ್ ಫೆಡರರ್ ಮತ್ತು ಸ್ಟಾನ್ಲಿಸ್ಲೋವ್ ವಾವ್ರಿಂಕಾ  ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಮಾರಿಯಾ ಶರಪೋವಾ ಮೂರನೇ ಸುತ್ತು ತಲುಪಿದ್ದಾರೆ. ಸರೀನಾ ವಿಲಿಯಂಸ್. , ಆ್ಯಂಡಿ ಮುರ್ರೆ, ರಾಫೆಲ್ ನಡಾಲ್ ಮೊದಲಾದವರು ಮೊದಲ ಪಂದ್ಯವನ್ನು ಗೆದ್ದು ನಂತರದ ಸುತ್ತಿಗೆ ಅರ್ಹತೆ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com