ಭಾರತಕ್ಕೆ ಎಫ್1 ಮರಳಿದರೆ ಸಂತೋಷ: ಬರ್ನಿ

ಫಾರ್ಮುಲಾ ಒನ್ ಗ್ರ್ಯಾನ್ ಪ್ರೀ ರೇಸ್ ಅನ್ನು 2016ರಲ್ಲಿ ಮತ್ತೆ ಭಾರತಕ್ಕೆ ಮರಳುವಂತೆ ಪ್ರಯತ್ನಿಸಲು ಆಯೋಜಕರಾದ ಜೇಪೀ ಸಮೂಹಕ್ಕೆ ಕಾಲಾವಕಾಶ ಕಡಿಮೆ...
ಬರ್ನಿ ಎಕ್ಲೆನ್‍ಸ್ಟನ್
ಬರ್ನಿ ಎಕ್ಲೆನ್‍ಸ್ಟನ್

ನವದೆಹಲಿ: ಫಾರ್ಮುಲಾ ಒನ್ ಗ್ರ್ಯಾನ್ ಪ್ರೀ ರೇಸ್ ಅನ್ನು 2016ರಲ್ಲಿ ಮತ್ತೆ ಭಾರತಕ್ಕೆ ಮರಳುವಂತೆ ಪ್ರಯತ್ನಿಸಲು ಆಯೋಜಕರಾದ ಜೇಪೀ ಸಮೂಹಕ್ಕೆ ಕಾಲಾವಕಾಶ ಕಡಿಮೆ ಇದೆ. ಎಲ್ಲ ಸಮಸ್ಯೆ ಬಗೆಹರಿದು ರೇಸ್ ಭಾರತಕ್ಕೆ ಮರಳಿದರೆ ಸಂತೋಷವಾಗುತ್ತದೆ ಎಂದು ಎಫ್ ಒನ್‍ನ ಮುಖ್ಯಸ್ಥ ಬರ್ನಿ ಎಕ್ಲೆನ್‍ಸ್ಟನ್ ತಿಳಿಸಿದ್ದಾರೆ.

ಜೇಪೀ ಸಮೂಹ ಈವರೆಗೂ ರೇಸ್ ನಡೆಸುವ ತೆಗೆದುಕೊಳ್ಳುವ ತೀರ್ಮಾನಕ್ಕಾಗಿ ಕಾಯುತ್ತಿದ್ದೇವೆ. ತೆರಿಗೆ ಹಾಗೂ ಇತರೆ ವಿಷಯಗಳಲ್ಲಿನ ಸಮಸ್ಯೆಗಳು ಪರಿಹಾರವಾಗಿ ಮತ್ತೆ ಇಂಡಿಯನ್ ಜಿಪಿ ಕ್ಯಾಲೆಂಡರ್‍ಗೆ ಮರಳಿದರೆ ತುಂಬಾ ಸಂತೋಷವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಜೆಪಿಎಸ್‍ಐನ ಮುಖ್ಯಸ್ಥ ಸಮೀರ್ ಗೌರ್ ಜತೆಗೆ ಚರ್ಚೆ ನಡೆಸಿದ ನಂತರ ಮಾತನಾಡಿದ ಬರ್ನಿ, ಪ್ರಸ್ತುತ ಎದುರಾಗಿರುವ ಸಮಸ್ಯೆಗಳು ಬಗೆಹರಿದು, ಮುಂದಿನ ವರ್ಷ ಗ್ರ್ಯಾನ್ ಪ್ರೀ ರೇಸ್ ಭಾರತಕ್ಕೆ ಮರಳುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com