
ಸಿಡ್ನಿ : ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಟೂರ್ನಿಯಲ್ಲಿ ಭಾರತೀಯ ಅಭಿಮಾನಿಗಳ ಕನಸು ಭಗ್ನಗೊಂಡಿದೆ. ವಿಶ್ವದ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್, ಟೂರ್ನಿಯ ಕ್ವಾರ್ಟರ್ ಫೈನಲ್‍ನಲ್ಲಿ ಸೋಲನುಭವಿಸುವ ಮೂಲಕ ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್, ಚೀನಾದ ಮಾಜಿ ನಂಬರ್ ಒನ್ ಆಟಗಾರ್ತಿ ಶಿಕ್ಷಿಯಾನ್ ವಾಂಗ್ ವಿರುದ್ಧ 15-21, 13-21 ಗೇಮ್ ಗಳ ಅಂತರದಲ್ಲಿ ಮುಖಭಂಗ ಅನುಭವಿಸಿದರು. ಈ ಮೂಲಕ ರು. 4.78 ಕೋಟಿ ಬಹುಮಾನಮೊತ್ತದ ಟೂರ್ನಿಯಲ್ಲಿ ಭಾರತದ ಹೋರಾಟ ಮುಕ್ತಾಯಗೊಂಡಿದೆ.
ಟೂರ್ನಿಯ ಮೊದಲ ಸುತ್ತಿನಲ್ಲಿ ಭರವಸೆಯ ಆಟಗಾರರಾದ ಪರುಪಳ್ಳಿ ಕಶ್ಯಪ್ ಮತ್ತು ಪಿ.ವಿ ಸಿಂಧು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಸೋಲನುಭವಿಸಿದ್ದರು.
ಇನ್ನು ಕಾಮನ್‍ವೆಲ್ತ್ ಪದಕ ವಿಜೇತ ಜೋಡಿಯಾದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಹಾಗೂ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ 4ನೇ ರ್ಯಾಂಕಿಂಗ್‍ನ ಕೆ. ಶ್ರೀಕಾಂತ್ ಸೋಲನುಭವಿಸಿದ್ದರು.
ಹಾಗಾಗಿ ಸೈನಾ ನೆಹ್ವಾಲ್ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದರು. ಅಲ್ಲದೆ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿತ್ತು.
ಸೈನಾ ಅವರ ಈ ಸೋಲಿನಿಂದ ಭಾರತೀಯ ಅಭಿಮಾನಿಗಳ ಆಸೆ ಕಮರಿದೆ.
ಆರಂಭದಲ್ಲಿ ವಾಂಗ್ ವಿರುದ್ಧ ಪ್ರಬಲ ಪೈಪೋಟಿ ನೀಡಿದ್ದ ಸೈನಾ ನೆಹ್ವಾಲ್, ನಂತರದ ಹಂತದಲ್ಲಿ ನಿಯಂತ್ರಣ ಕಳೆದುಕೊಂಡರು. ಪಂದ್ಯದ ಆರಂಭದಿಂದಲೇ ಸೈನಾ ವಿರುದ್ಧ ಬಿಗಿ ನಿಯಂತ್ರಣ ಸಾಧಿಸಿದ ವಾಂಗ್, ಮೊದಲ ಗೇಮ್ ನಲ್ಲಿ 21-15ರ ಮುನ್ನಡೆ ಸಾ„ಸಿದರು. ಒಂದು ಹಂತ ದಲ್ಲಿ ಸೈನಾ ನೆಹ್ವಾಲ್ ಮೊದಲ ಸೆಟ್‍ನಲ್ಲಿ 14-14ರ ಸಮಬಲ ಸಾಧಿಸಿದರು.
ಆನಂತರ ವಾಂಗ್ ಆಕ್ರಮಣಕಾರಿ ಆಟ ಪ್ರದರ್ಶಿಸಿ ಗೇಮ್ ಅನ್ನು ಕಸಿದು ಕೊಂಡರು.
ಇನ್ನು ಎರಡನೇ ಗೇಮ್ ನಲ್ಲೂ ವಾಂಗ್ ತಮ್ಮ ಬಿಗಿ ಹಿಡಿತ ಸಾಧಿಸಿದ ಪರಿಣಾಮ, 21-13ರ ಮುನ್ನಡೆಯೊಂದಿಗೆ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಈ ಗೆಲವಿನ ಮೂಲಕ ವಾಂಗ್, ಸೈನಾ ವಿರುದ್ಧದ ಹೋರಾಟದಲ್ಲಿ ಸಮಬಲ ಸಾ„ಸಿದರು. ಈ ಉಭಯರ 12 ಪಂದ್ಯಗಳ ಮುಖಾಮುಖಿಯಲ್ಲಿ ಇಬ್ಬರೂತಲಾ 6 ಪಂದ್ಯಗಳಲ್ಲಿ ಗೆಲವು
ದಾಖಲಿಸಿದಂತಾಗಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಶಿಕ್ಷಿಯಾನ್ ವಾಂಗ್ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ 12ನೇ ರ್ಯಾಂಕಿಂಗ್‍ನ ಆಟಗಾರ್ತಿ ದಕ್ಷಿಣ ಕೊರಿಯಾದ ಬೇಯೋನ್ ಜು ವಿರುದ್ಧ ಸೆಣಸಲಿದ್ದಾರೆ. ಜು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಮೈಕೆಲ್ ಲಿ ವಿರುದ್ಧ 21-8, 17-21, 21-10 ಗೇಮ್ ಗಳಿಂದಜಯಿಸಿದರು.
Advertisement