ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಚಂದ್ರಪಾಲ್‍ಗೆ ಸ್ಥಾನ ಇಲ್ಲ

ವೆಸ್ಟ್ ಇಂಡೀಸ್‍ನ ಹಿರಿಯ ಹಾಗೂ ಖ್ಯಾತ ಕ್ರಿಕೆಟಿಗ ಶಿವನಾರಾಯಣ ಚಂದ್ರಪಾಲ್ ಅವರಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ತಂಡದ ಬಾಗಿಲನ್ನು ಮುಚ್ಚಿದೆ...
ಶಿವನಾರಾಯಣ ಚಂದ್ರಪಾಲ್
ಶಿವನಾರಾಯಣ ಚಂದ್ರಪಾಲ್

ಕಿಂಗ್ಸ್‍ಸ್ಟನ್: ವೆಸ್ಟ್ ಇಂಡೀಸ್‍ನ ಹಿರಿಯ ಹಾಗೂ ಖ್ಯಾತ ಕ್ರಿಕೆಟಿಗ ಶಿವನಾರಾಯಣ ಚಂದ್ರಪಾಲ್ ಅವರಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ತಂಡದ ಬಾಗಿಲನ್ನು ಮುಚ್ಚಿದೆ.

ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕಾಗಿ 14 ಸದಸ್ಯರ ವೆಸ್ಟ್ ಇಂಡೀಸ್ ತಂಡವನ್ನು ಆಯ್ಕೆ ಮಾಡಿದ್ದು, ಈ ಪಟ್ಟಿಯಿಂದ ಚಂದ್ರಪಾಲ್ ಅವರಿಗೆ ಕೊಕ್ ನೀಡಲಾಗಿದೆ. ವೆಸ್ಟ್ ಇಂಡೀಸ್ ನ ಮಾಜಿ ನಾಯಕ ಕ್ಲೈವ್ ಲಾಯ್ಡ್ ನೇತೃತ್ವದ ಆಯ್ಕೆ ಸಮಿತಿ, ನಿರೀಕ್ಷೆಯಂತೆ ಚಂದ್ರಪಾಲ್ ಮತ್ತು ರೊಸೆವ್ ಡೊಮಿನಿಕಾ ಅವರ ಹೆಸರನ್ನು ಕೈಬಿಟ್ಟಿದೆ.

1994ರಲ್ಲಿ ವಿಂಡೀಸ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಚಂದ್ರಪಾಲ್, 164 ಟೆಸ್ಟ್ ಪಂದ್ಯಗಳನ್ನಾಡಿದ್ದು, 11,867 ರನ್ ದಾಖಲಿಸಿದ್ದಾರೆ. ಅಲ್ಲದೆ ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ರನ್ ಗಳಿಸಿರುವ ಆಟಗರನಾಗಲು ಚಂದ್ರಪಾಲ್, ಬ್ರಯನ್ ಲಾರಾ ಅವರಿಗಿಂತ 86 ರನ್ ಗಳ ಹಿನ್ನಡೆಯಲ್ಲಿದ್ದಾರೆ.

ಗುಯಾನಾ ಮೂಲದ ಚಂದ್ರಪಾಲ್ ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕೇವಲ 15.33ರ ಸರಾಸರಿಯಲ್ಲಿ 92 ರನ್ ದಾಖಲಿಸಿದ್ದರು. ಈ ಹಿಂದೆ ಚಂದ್ರಪಾಲ್ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾದಾಗ ಸ್ವತಃ ಬ್ರಯಾನ್ ಲಾರಾ, ಟೆಸ್ಟ್ ತಂಡದಲ್ಲಿ ಚಂದ್ರಪಾಲ್‍ಗೆ ಅವಕಾಶ ನೀಡಬೇಕು ಎಂದು ಬೆಂಬಲ ನೀಡಿದ್ದರು. ವೆಸ್ಟ್ ಇಂಡೀಸ್ ಜೂನ್ 3ರಿಂದ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com