ರಿಯೋ ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆದ ಗುರ್​ಪ್ರೀತ್ ಸಿಂಗ್

ಮುಂದಿನ ವರ್ಷ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ಮತ್ತೊಬ್ಬ ಶೂಟರ್ ಗುರ್ ಪ್ರೀತ್ ಸಿಂಗ್ ಅರ್ಹತೆ ಪಡೆದುಕೊಂಡಿದ್ದಾರೆ...
ಗುರ್​ಪ್ರೀತ್ ಸಿಂಗ್
ಗುರ್​ಪ್ರೀತ್ ಸಿಂಗ್

ನವದೆಹಲಿ: ಮುಂದಿನ ವರ್ಷ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ಮತ್ತೊಬ್ಬ ಶೂಟರ್ ಗುರ್ ಪ್ರೀತ್ ಸಿಂಗ್ ಅರ್ಹತೆ ಪಡೆದುಕೊಂಡಿದ್ದಾರೆ.

ಮ್ಯೂನಿಚ್‍ನಲ್ಲಿ ಭಾನುವಾರ ನಡೆದ ಐಎಸ್ ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದ ಗುರ್ ಪ್ರೀತ್ ಸಿಂಗ್, ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಅಂತಿಮ ಸುತ್ತಿನಲ್ಲಿ 154 ಅಂಕಗಳನ್ನು ಸಂಪಾದಿಸಿದ ಗುರ್ ಪ್ರೀತ್, ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಪೋರ್ಚುಗಲ್‍ನ ಜೊವಾ ಕೊಸ್ಟಾ (201.4) ಅಗ್ರಸ್ಥಾನ ಪಡೆದು
ವಿಜೇತರಾದರೆ, ಜಪಾನ್‍ನ ಟೊಮೊಯುಕಿ (200.4) ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಸಂಪಾದಿಸಿದರು. ಚೀನಾದ ಸನ್ ಯಾಂಗ್ (177.3) ತೃತೀಯ ಸ್ಥಾನ ಪಡೆದರು. ಇನ್ನು ದಕ್ಷಿಣ ಕೊರಿಯಾದ ಡೇಮ್ ಯುಂಗ್ ಲೀ (136) ಐದನೇ ಸ್ಥಾನ ಪಡೆದು ಒಲಿಂಪಿಕ್ಸ್ ಗೆ ಅರ್ಹತೆ ಸಂಪಾದಿಸಿದರು.

ಶನಿವಾರ ನಡೆದಿದ್ದ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದರೂ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಗುರ್ ಪ್ರೀತ್ ವಿಫಲವಾಗಿದ್ದರು. ಈ ಮೂಲಕ ಈ ವಿಶ್ವಕಪ್‍ನಲ್ಲಿ ಅಭಿನವ್ ಬಿಂದ್ರಾ ಸೇರಿದಂತೆ ಇಬ್ಬರು ಒಲಿಂಪಿಕ್ಸ್ ಅರ್ಹತೆ ಪಡೆದು ಕೊಂಡಿದ್ದು, ಒಟ್ಟಾರೆಯಾಗಿ ಐದನೇಯವರಾಗಿದ್ದಾರೆ. ಗಗನ್ ನಾರಂಗ್, ಜಿತು ರೈ ಮತ್ತು ಅಪೂರ್ವ ಚಾಂಡೆಲ ಈ ಹಿಂದೆ ಅರ್ಹತೆ ಪಡೆದ ಶೂಟರ್‍ಗಳಾಗಿದ್ದಾರೆ. 15 ವಿಭಾಗಗಳ ಸ್ಪರ್ಧೆಗಳಿಂದ ಒಂದು ದೇಶ 30 ಸ್ಥಾನಗಳಿಗೆ ಅರ್ಹತೆ ಪಡೆಯುವ ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com