ಬಿಸಿಸಿಐ ಸಲಹಾ ಸಮಿತಿಗೆ ತೆಂಡುಲ್ಕರ್, ಗಂಗೂಲಿ ಮತ್ತು ಲಕ್ಷ್ಮಣ್ ಸೇರ್ಪಡೆ

ನಿವೃತ್ತ ಭಾರತೀಯ ಕ್ರಿಕೆಟ್ ನ ಬ್ಯಾಟಿಂಗ್ ತಾರೆಗಳಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸೋಮವಾರ ಹೊಸದಾಗಿ ರಚನೆಯಾಗಿರುವ...
ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ಸಚಿನ್ ತೆಂಡುಲ್ಕರ್
ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ಸಚಿನ್ ತೆಂಡುಲ್ಕರ್

ಮುಂಬೈ: ನಿವೃತ್ತ ಭಾರತೀಯ ಕ್ರಿಕೆಟ್ ನ ಬ್ಯಾಟಿಂಗ್ ತಾರೆಗಳಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸೋಮವಾರ ಹೊಸದಾಗಿ ರಚನೆಯಾಗಿರುವ ಭಾರತೀಯಾ ಕ್ರಿಕೆಟ್ ನಿಯಂತ್ರಣಾ ಮಂಡಲಿಯ (ಬಿಸಿಸಿಐ) ಸಲಹಾ ಸಮಿತಿಗೆ ಸೇರ್ಪಡೆಯಾಗಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಧೃಢೀಕರಿಸಿದ್ದಾರೆ "ಈ ದಿನಕ್ಕೆ ಅದ್ಭುತ ಪ್ರಾರಂಭ. ಸಚಿನ್, ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ ಭಾಗವಾಗಿರುತ್ತಾರೆ" ಎಂದು ತಿಳಿಸಿದ್ದಾರೆ.

"ನಾನು ಸಚಿನ್, ಸೌರವ್ ಮತ್ತು ಲಕ್ಷ್ಮಣ್ ಅವರನ್ನು ಸ್ವಾಗತಿಸುತ್ತೇನೆ ಹಾಗು ಅಭಿನಂದಿಸುತ್ತೇನೆ. ನಿಮ್ಮ ಸಲಹೆ, ಬೆಂಬಲದಿಂದ ಹೊಸ ಇನ್ನಿಂಗ್ಸ್ ಪ್ರಾರಂಭಿಸುವುದು ನಮಗೆ ಹೆಮ್ಮೆ ಅನ್ನಿಸುತ್ತಿದೆ" ಎಂದು ಅವರು ಬರೆದಿದ್ದಾರೆ.

ಆದರೆ ಈ ಆಟಗಾರರು ಸಂಸ್ಥೆಯಲ್ಲಿ ಯಾವ ಪಾತ್ರ ವಹಿಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟನೆಯಿಲ್ಲ. ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ತಂಡದ ನಿರ್ದೇಶಕರಾಗಲಿದ್ದಾರೆ ಎಂಬ ಊಹಾಪೋಹಗಳಿವೆ.

೧೯೮೯ ರಿಂದ ೨೦೧೩ರವರೆಗೆ ಭಾರತೀಯ ಕ್ರಿಕೆಟ್ ರಂಗದಲ್ಲಿ ಮಿಂಚಿದ ಈ ತಾರೆಯರು, ತಂಡದ ತರಬೇತುದಾರನ ಆಯ್ಕೆ ಮತ್ತು ಕ್ರಿಕೆಟ್ ಆಟದ ಅಭಿವೃದ್ಧಿಯ ಬಗ್ಗೆ ಸಲಹೆಗಳನ್ನು ನೀಡುತ್ತಾರೆ ಎನ್ನಲಾಗಿದೆ.

ಡಂಕನ್ ಫ್ಲೆಚರ್ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರನಾಗಿ ನಿರ್ಗಮಿಸಿದ್ದರು ಇನ್ನೂ ಯಾವುದೇ ಹೊಸ ತರಬೇತುದಾರನ ಆಯ್ಕೆಯಾಗಿಲ್ಲ. ಹಾಗೂ ಈ ಸಮಿತಿಯಲ್ಲಿ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಅವರ ಹೆಸರಿಲ್ಲದಿರುವುದು ಹೆಚ್ಚಿನ ವದಂತಿಗಳಿಗೆ ಎಡೆಮಾಡಿಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com