ಸುಂದರ್ ರಾಮನ್
ಕ್ರೀಡೆ
ಐಪಿಎಲ್ ಸಿಇಓ ಹುದ್ದೆಗೆ ಸುಂದರ್ ರಾಮನ್ ರಾಜೀನಾಮೆ
ಐಪಿಎಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್ ರಾಮನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ...
ನವದೆಹಲಿ: ಐಪಿಎಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್ ರಾಮನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸದಾ ವಿವಾದಗಳಿಂದಲೇ ಸುದ್ದಿಯಾಗಿದ್ದ ಕ್ರಿಕೆಟ್ ನಿರ್ವಾಹಕ ಸುಂದರ್ ರಾಮನ್ ರಾಜೀನಾಮೆ ಸಲ್ಲಿಸಿದ್ದು ಬಿಸಿಸಿಐ ಆದನ್ನು ಅಂಗೀಕರಿಸಲಾಗಿದೆ. ನಾಗಪುರದಲ್ಲಿ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರನ್ನು ಭೇಟಿಯಾಗಿ ರಾಮನ್ ರಾಜೀನಾಮೆ ಪತ್ರ ನೀಡಿದ್ದಾರೆ.
2013 ರ ಐಪಿಎಲ್ ಹಗರಣ ನಡೆದ ನಂತರವೂ ರಾಮನ್ ಅವರನ್ನು ಹುದ್ದೆಯಲ್ಲಿ ಮುಂದುವರಿಸಿದ್ದಕ್ಕಾಗಿ ಈ ಹಿಂದೆ ಶಶಾಂಕ್ ಮನೋಹರ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.
2013 ರ ಐಪಿಎಲ್ ಹಗರಣಕ್ಕೆ ಸಂಬಂಧಿಸಿ ರಾಮನ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಸುಂದರ್ ರಾಮನ್ ಸ್ವ ಇಚ್ಚೆಯಿಂದ ರಾಜೀನಾಮೆ ನೀಡದಿದ್ದರೇ, ಅವರನ್ನು ವಜಾಗೊಳಿಸಲು ಬಿಸಿಸಿಐ ತೀರ್ಮಾನಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ