ಟೇಲರ್ ಚೊಚ್ಚಲ ಅರ್ಧಶತಕ, ಪಾಕಿಸ್ತಾನದ ಯಾಸೀರ್‍ಗೆ ಎರಡು ವಿಕೆಟ್

ಮಧ್ಯಮ ಕ್ರಮಾಂಕದಲ್ಲಿ ಜೇಮ್ಸ್ ಟೇಲರ್ (74: 141 ಎಸೆತ, 6 ಬೌಂಡರಿ) ಗಳಿಸಿದ ಉಪಯುಕ್ತ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಮೂರನೇ ಹಾಗೂ ಕೊನೆಯ...
ಜೇಮ್ಸ್ ಟೇಲರ್
ಜೇಮ್ಸ್ ಟೇಲರ್

ಮಧ್ಯಮ ಕ್ರಮಾಂಕದಲ್ಲಿ ಜೇಮ್ಸ್  ಟೇಲರ್ (74: 141 ಎಸೆತ, 6 ಬೌಂಡರಿ) ಗಳಿಸಿದ ಉಪಯುಕ್ತ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವತ್ತ ಹೆಜ್ಜೆ ಇರಿಸಿದೆ.

ಇಲ್ಲಿನ ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ ಆ ಮೂಲಕ ಪಾಕಿಸ್ತಾನದ ಮೊದಲ ಇನ್ನಿಂಗ್ಸ್ (234)ಗೆ 12 ರನ್‍ಗಳ ಹಿನ್ನಡೆಯಲ್ಲಿತ್ತು. ಆಟ ನಿಂತಾಗ ಟೇಲರ್ ಜತೆಗೆ ವಿಕೆಟ್ ಕೀಪರ್ ಜಾನಿ ಬೇರ್‍ಸ್ಟೋ 37 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು. ಈ ಜೋಡಿ 5ನೇ ವಿಕೆಟ್‍ಗೆ 83 ರನ್‍ಗಳನ್ನು ಕಲೆಹಾಕುವುದರೊಂದಿಗೆ ತಂಡ ಹೆಚ್ಚು ಬಾರಿಸಲ್ಪಡದಂತೆ ನೋಡಿಕೊಂಡಿತು.

ಭಾನುವಾರ ಇನ್ನಿಂಗ್ಸ್ ಆರಂಭಿಸಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದ್ದ ಇಂಗ್ಲೆಂಡ್, ಸೋಮವಾರ ಸರಿದಿಸೆಯಲ್ಲೇ ಹೆಜ್ಜೆಮಇರಿಸಿದರೂ, ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ನಾಯಕ ಅಲೆಸ್ಟೈರ್ ಕುಕ್ (49) ಕೇವಲ 1 ರನ್‍ನಿಂದ  ಅರ್ಧಶತಕ ವಂಚಿತರಾದರೆ, ಮೊಯೀನ್ ಅಲಿ (14) ಮತ್ತು ಇಯಾನ್ ಬೆಲ್ 40 ರನ್ ಗಳಿಸಿ ಔಟಾದರೆ, ಜೋ ರೂಟ್ ಕೇವಲ 4 ರನ್‍ಗೆ ನಿರುತ್ತರರಾದರು. ಪಾಕ್ ಪರ ಯಾಸೀರ್ ಶಾ 2 ವಿಕೆಟ್ ಗಳಿಸಿದರೆ, ರಹತ್ ಅಲಿ ಹಾಗೂ ಶೋಯೇಬ್ ಮಲಿಕ್ ತಲಾ ಒಂದೊಂದು ವಿಕೆಟ್ ಗಳಿಸಿದರು.

ಬೆನ್ ಸ್ಟೋಕ್ಸ್ ಅಲಭ್ಯ: ಭಾನುವಾರ ಫೀಲ್ಡಿಂಗ್ ನಿರತವಾಗಿದ್ದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡ ಇಂಗ್ಲೆಂಡ್ ತಂಡದ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಪಂದ್ಯಕ್ಕೆ ಬಹುತೇಕ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ.

ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮೊದಲ ಇನ್ನಿಂಗ್ಸ್: 234
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
92 ಓವರ್‍ಗಳಲ್ಲಿ 4 ವಿಕೆಟ್‍ಗೆ 222
ಟೇಲರ್ 74*,ಬೇರ್‍ಸ್ಟೋ 37*, ಯಾಸೀರ್ 79ಕ್ಕೆ 2.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com