ಶ್ರೀಲಂಕಾ ಗೆಲ್ಲಿಸಿದ ತಿಲಕರತ್ನೆ ದಿಲ್ಷಾನ್

ಮಳೆಯಿಂದ ಅಡಚಣೆಯಾದ ಪಂದ್ಯದಲ್ಲಿ ತಿಲಕರತ್ನೆ ದಿಲ್ಷಾನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ...
ತಿಲಕರತ್ನೆ ದಿಲ್ಷಾನ್
ತಿಲಕರತ್ನೆ ದಿಲ್ಷಾನ್

ಕೊಲಂಬೊ: ಮಳೆಯಿಂದ ಅಡಚಣೆಯಾದ ಪಂದ್ಯದಲ್ಲಿ  ತಿಲಕರತ್ನೆ ದಿಲ್ಷಾನ್  ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಶ್ರೀಲಂಕಾ  ತಂಡ ಮೊದಲ ಏಕದಿನ ಪಂದ್ಯದಲ್ಲಿ  ವೆಸ್ಟ್ ಇಂಡೀಸ್  ವಿರುದ್ಧ 1 ವಿಕೆಟ್ ರೋಚಕ ಜಯ ದಾಖಲಿಸಿದೆ.

ಭಾನುವಾರ ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಮಳೆ ಅಡ್ಡಿಯ ಕಾರಣ 26 ಓವರ್‌ಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, 26 ಓವರ್‌ಗಳಲ್ಲಿ 8 ವಿಕೆಟ್‌ಗೆ 159 ರನ್ ಕಲೆಹಾಕಿತು. ಬಳಿಕ ಡಕ್‌ವರ್ತ್ ಲೂಯಿಸ್ ನಿಯಮದನ್ವಯ 26 ಓವರ್‌ಗಳಲ್ಲಿ 163 ರನ್ ಗುರಿ ಪಡೆದ ಆತಿಥೇಯ ಶ್ರೀಲಂಕಾ 24.5 ಓವರ್‌ಗಳಲ್ಲಿ ಒಂದು ವಿಕೆಟ್‌ನಿಂದ ಜಯ ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್ ಕುಶಲ್ ಪೆರೆರಾ(17) ಅವರ ಆಘಾತದ ನಡುವೆಯೂ ಮಿಂಚಿದ ತಿಲಕರತ್ನೆ ದಿಲ್ಷಾನ್ ಕೇವಲ 32 ಎಸೆತಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ 59 ರನ್ ಸಿಡಿಸಿದರು. ಇದರಲ್ಲಿ ಆರು ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿತ್ತು.

ಇದಕ್ಕೂ ಮುನ್ನ ಮಳೆಯಿಂದಾಗಿ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ಡರೆನ್ ಬ್ರಾವೊ(38), ಆ್ಯಂಡ್ರೆ ರಸೆಲ್(41) ಮತ್ತು ಜೇಸನ್ ಹೋಲ್ಡರ್(36) ಅವರ ಕಾಣಿಕೆಯಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಸಂಕ್ಷಿಪ್ತ ಸ್ಕೋರ್

ವೆಸ್ಟ್ ಇಂಡೀಸ್: 26 ಓವರ್‌ಗಳಲ್ಲಿ 8 ವಿಕೆಟ್‌ಗೆ 159(ಡರೆನ್ ಬ್ರಾವೊ 36, ಆ್ಯಂಡ್ರೆ ರಸೆಲ್ 41, ಜೇಸನ್ ಹೋಲ್ಡರ್ 36; ಸುರಂಗ ಲಕ್ಮಲ್ 15ಕ್ಕೆ 3).

ಶ್ರೀಲಂಕಾ: 24.5 ಓವರ್‌ಗಳಲ್ಲಿ 9 ವಿಕೆಟ್‌ಗೆ 164(ದಿಲ್ಷಾನ್ 59, ಅಜಂತಾ ಮೆಂಡಿಸ್ ಅಜೇಯ 21; ಸುನಿಲ್ ನರೇನ್ 21ಕ್ಕೆ 3, ಜೊನಾಥನ್ ಕಾರ್ಟರ್ 14ಕ್ಕೆ 2).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com