ಟೆಸ್ಚ್ ಕ್ರಿಕೆಟ್ ಗೆ ವಿದಾಯ ಹೇಳಿದ ಮಲಿಕ್ , ಹಾಲಿ ನಡೆಯುತ್ತಿರುವ ಪಂದ್ಯವೇ ಅಂತಿಮ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೇ...
ಶೋಯೆಬ್ ಮಲ್ಲಿಕ್
ಶೋಯೆಬ್ ಮಲ್ಲಿಕ್

ಶಾರ್ಜಾ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿಯಲಿದ್ದಾರೆ.

5 ವರ್ಷಗಳ ಬಳಿಕ ಪಾಕ್ ಟೆಸ್ಟ್ ತಂಡಕ್ಕೆ ಪುನರಾಗಮನ ಮಾಡಿದ್ದ 33ರ ಹರೆಯದ ಮಲಿಕ್, ಇಂಗ್ಲೆಂಡ್ ವಿರುದ್ಧ ಅಬುಧಾಬಿಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 245 ರನ್ ಗಳಿಸಿ ಮಿಂಚಿದ್ದರು. ಅದು ಟೆಸ್ಟ್ ವೃತ್ತಿಜೀವನದಲ್ಲಿ ಮಲಿಕ್ ಗಳಿಸಿದ್ದ ಚೊಚ್ಚಲ ದ್ವಿಶತಕವೂ ಆಗಿತ್ತು. ಆದರೆ ಮುಂದಿನ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲಿ (2, 7, 38, 0) ಮಲಿಕ್ ವಿಫಲರಾಗಿದ್ದರು.

''ಮೂರನೇ ಟೆಸ್ಟ್ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ಕಳೆದ ನಾಲ್ಕು ಇನಿಂಗ್ಸ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ನಿವೃತ್ತಿ ಹೇಳುತ್ತಿಲ್ಲ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ನಿಟ್ಟಿನಲ್ಲಿ ಹಾಗೂ 2019ರ ಏಕದಿನ ವಿಶ್ವಕಪ್ ಕಡೆ ಗಮನ ಹರಿಸುವ ಉದ್ದೇಶದಿಂದ ಟೆಸ್ಟ್‌ಗೆ ವಿದಾಯ ಹೇಳುತ್ತಿದ್ದೇನೆ. ಯುವ ಆಟಗಾರರಿಗೆ ಸ್ಥಾನ ಬಿಟ್ಟುಕೊಡಲು ಇದು ಸಕಾಲ ಎಂದು ನನಗನ್ನಿಸಿತು. ನನ್ನ ಸ್ಥಾನವನ್ನು ತುಂಬಲು ಪಾಕ್‌ನಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ,'' ಎಂದು ಮಲಿಕ್ ತಿಳಿಸಿದ್ದಾರೆ.

2001ರಲ್ಲಿ ಮುಲ್ತಾನ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಮಲಿಕ್, 35 ಟೆಸ್ಟ್ ಪಂದ್ಯಗಳನ್ನಾಡಿದ್ದು, 3 ಶತಕ ಸಹಿತ 1898 ರನ್ ಮತ್ತು 29 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com