ರಾಜ್ಯ ರಣಜಿ ತಂಡ ಪ್ರಕಟ: ಒಡಿಸ್ಸಾ ವಿರುದ್ಧ ನವೆಂಬರ್ 7 ರಿಂದ ಮೈಸೂರಿನಲ್ಲಿ ಹಣಾಹಣಿ

ಮುಂಬರುವ ಶನಿವಾರದಿಂದ ಮೈಸೂರಿನಲ್ಲಿ ಒಡಿಶಾ ವಿರುದ್ಧ ನಡೆಯಲಿರುವ ರಣಜಿ ಪಂದ್ಯಕ್ಕೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ...
ಸ್ಟುವರ್ಟ್ ಬಿನ್ನಿ ಮತ್ತು ಕರುಣ್ ನಾಯರ್
ಸ್ಟುವರ್ಟ್ ಬಿನ್ನಿ ಮತ್ತು ಕರುಣ್ ನಾಯರ್

ಬೆಂಗಳೂರು: ಮುಂಬರುವ ಶನಿವಾರದಿಂದ ಮೈಸೂರಿನಲ್ಲಿ  ಒಡಿಶಾ ವಿರುದ್ಧ ನಡೆಯಲಿರುವ ರಣಜಿ ಪಂದ್ಯಕ್ಕೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಆಲ್ ರೌಂಡರ್  ಸ್ಟುವರ್ಟ್ ಬಿನ್ನಿ ಹಾಗೂ ಕರುಣ್ ನಾಯರ್ ವಾಪಸಾಗಿದ್ದಾರೆ.

ಅಗ್ರ ಕ್ರಮಾಕಂದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಮತ್ತು ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಅವರನ್ನು ಭಾರತ ಟೆಸ್ಟ್ ತಂಡದಿಂದ ಗುರುವಾರ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಆಟಗಾರರು ತಮ್ಮ ತಮ್ಮ ರಣಜಿ ಟ್ರೋಫಿ ತಂಡಗಳಿಗೆ ಸೇರಿಕೊಳ್ಳಬಹುದಾಗಿದೆ.

ಆದಾಗ್ಯೂ, ಈ ಮೂವರು ಇದೇ ತಿಂಗಳು 14ರಿಂದ 18ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್‌ಗೂ ಮುನ್ನ ರಾಷ್ಟ್ರೀಯ ತಂಡಕ್ಕೆ ಮತ್ತೆ ಸೇರ್ಪಡೆಯಾಗಲಿದ್ದಾರೆ. ಮೊದಲ ಟೆಸ್ಟ್ ನ.5ರಿಂದ 9ರ ವರೆಗೆ ಮೊಹಾಲಿಯಲ್ಲಿ ಪ್ರಗತಿಯಲ್ಲಿದೆ.

''ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್ ಮತ್ತು ಸ್ಟುವರ್ಟ್ ಬಿನ್ನಿ ಅವರನ್ನು ರಾಷ್ಟ್ರೀಯ ತಂಡದಿಂದ ಬಿಡುಗಡೆಗೊಳಿಸಲಾಗಿದೆ. ಮೊಹಾಲಿಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೊದಲ ಟೆಸ್ಟ್ ಆಡುತ್ತಿದೆ,'' ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

''ಬಿಡುಗಡೆಯಾಗಿರುವ ಮೂವರು ರಣಜಿ ಟ್ರೋಫಿಯ ಮುಂದಿನ ಹಂತದ ಪಂದ್ಯಗಳಲ್ಲಿ ತಮ್ಮ ರಾಜ್ಯ ತಂಡವನ್ನು ಸೇರಿಕೊಳ್ಳಬಹುದಾಗಿದೆ ಹಾಗೂ ಬೆಂಗಳೂರಿನಲ್ಲಿ ಜರುಗಲಿರುವ ದ್ವಿತೀಯ ಟೆಸ್ಟ್‌ಗೂ ಮುನ್ನ ಮತ್ತೆ ಟೆಸ್ಟ್ ತಂಡವನ್ನು ಸೇರಿಕೊಳ್ಳಬೇಕು,''ಎಂದು ಬಿಸಿಸಿಐ ಹೇಳಿದೆ.

ಪಂಜಾಬ್ ರಣಜಿ ಟ್ರೋಫಿ ಆಟಗಾರ ಗುರ್‌ಕೀರತ್ ಸಿಂಗ್ ಮಾನ್ ಮತ್ತು ಮಂದೀಪ್ ಸಿಂಗ್ ಮೊದಲ ಟೆಸ್ಟ್‌ನಲ್ಲಿ ಕಾಯ್ದಿರಿಸಿದ ಆಟಗಾರರಾಗಿದ್ದಾರೆ.

ತಂಡ
ಆರ್ ವಿನಯ್ ಕುಮಾರ್, (ನಾಯಕ), ಸಿಎಂ ಗೌತಮ್(ಉಪನಾಯಕ), ರಾಬಿನ್ ಉತ್ತಪ್ಪ, ಆರ್ ಸಮರ್ಥ್, ಕರುಣ್ ನಾಯರ್, ಅಭಿಶೇಕ್ ರೆಡ್ಡಿ, ಶ್ರೇಯಸ್ ಗೋಪಾಲ್, ಶ್ರೀನಾಥ್ ಅರವಿಂದ್, ಅಭಿಮನ್ಯು ಮಿಥುನ್, ಎಚ್ .ಎಸ್ ಳರತ್, ಉದಿತ್ ಪಟೇಲ್, ಡೇವಿಡ್, ಮಥಿಯಾಸ್, ಮಯಾಂಕ್ ಅಗರ್ ವಾಲ್, ಜೆ.ಸುಚಿತ್, ಸ್ಟುವರ್ಟ್ ಬಿನ್ನಿ, ಕೌನೆಯಾಸ್ ಅಬ್ಬಾಸ್,

ಬ್ಯಾಟಿಂಗ್ ಕೋಚ್- ಜೆ. ಅರುಣ್ ಕುಮಾರ್

ಬೌಲಿಂಗ್ ಕೋಚ್- ಮನ್ಸೂರ್ ಅಲಿ ಖಾನ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com