ನವದೆಹಲಿ: ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಯಿಂದ ಹೊರಬಂದಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಪುರುಷರ ತಂಡ, ಎರಡು ಸ್ಥಾನಗಳ ಏರಿಕೆ ಕಂಡಿದ್ದು, ಆರನೇ ಸ್ಥಾನ ಪಡೆದಿದೆ. ಹಾಲಿ ವಿಶ್ವಲೀಗ್‍ನಲ್ಲಿ ತಂಡ ತೋರಿದ ಉತ್ತಮ ಪ್ರದರ್ಶನ ಭಾರತ ತಂಡದ ಏರಿಕೆಗೆ ಕಾರಣ. ಇದಲ್ಲದೆ, ಬಲಿಷ್ಠ ತಂಡಗಳಾದ ಬೆಲ್ಜಿಯಂ (7ನೇ ಸ್ಥಾನ), ನ್ಯೂಜಿಲೆಂಡ್ (8ನೇ ಸ್ಥಾನ) ಗಳನ್ನೂ ಹಿಂದಿಕ್ಕಿರುವುದು ವಿಶೇಷ. ಇನ್ನು, ಪಟ್ಟಿಯ ಮೊದಲ ಮೂರು ಸ್ಥಾನಗಳಲ್ಲಿ ಆಸ್ಟ್ರೇಲಿಯಾ, ಹಾಲೆಂಡ್ ಹಾಗೂ ಜರ್ಮನಿ ತಂಡಗಳಿವೆ. ಮಹಿಳೆಯರ ತಂಡಗಳ ವಿಭಾಗದಲ್ಲಿ, ಭಾರತ 13ನೇ ಸ್ಥಾನದಲ್ಲೇ ಮುಂದುವರೆದಿದೆ. ಒಲಿಂಪಿಕ್ಸ್ ಚಾಂಪಿಯನ್ ಕಿವೀಸ್ ಮೊದಲ ಸ್ಥಾನದಲ್ಲಿದೆ.