10 ಸಾವಿರ ರನ್ ದಾಖಲೆ ಬರೆದ ವಾಸೀಂ ಜಾಫರ್

ಪ್ರಸಕ್ತ ಋತುವಿನಲ್ಲಿ ವಿದರ್ಭ ತಂಡದ ಪರ ಆಡುತ್ತಿರುವ ಮುಂಬೈನ ಬ್ಯಾಟ್ಸ್‍ಮನ್ ವಾಸೀಂ ಜಾಫರ್, ರಣಜಿ ಟೂರ್ನಿಯಲ್ಲಿ 10,000 ರನ್ ಪೂರೈಸಿದ ಮೊದಲ...
ವಾಸಿಂ ಜಾಫರ್
ವಾಸಿಂ ಜಾಫರ್
Updated on
ಕೋಲ್ಕತಾ: ಪ್ರಸಕ್ತ ಋತುವಿನಲ್ಲಿ ವಿದರ್ಭ ತಂಡದ ಪರ ಆಡುತ್ತಿರುವ ಮುಂಬೈನ ಬ್ಯಾಟ್ಸ್‍ಮನ್ ವಾಸೀಂ ಜಾಫರ್, ರಣಜಿ ಟೂರ್ನಿಯಲ್ಲಿ 10,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‍ಮನ್ ಎಂಬ ದಾಖಲೆ ಬರೆದಿದ್ದಾರೆ. 
ಬಂಗಾಳ ವಿರುದ್ಧದ ಪಂದ್ಯದಲ್ಲಿ ಜಾಫರ್, ಆರಂಭಿಕರಾಗಿ ಕಣಕ್ಕಿಳಿದು 9 ರನ್ ಗಳಿಸಿದ್ದಾಗಲೇ ಈ ಸಾಧನೆ ಹೊರಹೊಮ್ಮಿದೆ. 1996-97ರಲ್ಲಿ ಮುಂಬೈ ತಂಡದ ಪರ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ ಜಾಫರ್, ಭಾನುವಾರ ಕಣಕ್ಕಿಳಿಯುವ ಮುನ್ನ ಈ ಮೈಲುಗಲ್ಲು ತಲುಪಲು 8 ರನ್‍ಗಳ ಅಗತ್ಯದಲ್ಲಿದ್ದರು. ಆಕರ್ಷಕ ಬೌಂಡರಿ ಮೂಲಕ ಜಾಫರ್ ಈ ಮಹತ್ತರ ಗಡಿ ತಲುಪಿ, ರಾಷ್ಟ್ರಮಟ್ಟದ ಕ್ರಿಕೆಟ್‍ನಲ್ಲಿ ಹೊಸ ಸಾಧನೆ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com