ನಿವೃತ್ತಿ ಘೋಷಿಸಿದ ರಮೇಶ್ ಪೊವಾರ್

ಟೀಂ ಇಂಡಿಯಾ ಮಾಜಿ ಆಫ್ಸ್ಪಿನ್ನರ್ ರಮೇಶ್ ಪೊವಾರ್ ಎಲ್ಲ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ತೆಗೆದುಕೊಳ್ಳುವ...
ರಮೇಶ್ ಪೊವರ್
ರಮೇಶ್ ಪೊವರ್
ಮುಂಬೈ: ಟೀಂ ಇಂಡಿಯಾ ಮಾಜಿ ಆಫ್ಸ್ಪಿನ್ನರ್ ರಮೇಶ್ ಪೊವಾರ್ ಎಲ್ಲ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದು, 2015-16ನೇ ಸಾಲಿನ ನಂತರ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ. 
ರಾಷ್ಟ್ರೀಯ ತಂಡದ ಪರ 31 ಏಕದಿನ ಪಂದ್ಯಗಳನ್ನಾಡಿರುವ ರಮೇಶ್ ಪೊವಾರ್, 34 ವಿಕೆಟ್ ಗಳಿಸಿದ್ದು, 2 ಟೆಸ್ಟ್ ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದಾರೆ. 
ರಣಜಿ ಟೂರ್ನಿಯಲ್ಲಿ ರಾಜಸ್ಥಾನ ಮತ್ತು ಗುಜರಾತ್ ತಂಡಗಳನ್ನು ಪ್ರತಿನಿಧಿಸುವ ಮುನ್ನ ಮುಂಬೈ ತಂಡವನ್ನು ಒಟ್ಟು 14 ಋತುವಿನಲ್ಲಿ ಪ್ರತಿನಿಧಿಸಿದ್ದ ರಮೇಶ್ ಪೊವಾರ್ 341 ವಿಕೆಟ್ ಪಡೆದಿದ್ದಾರೆ. 
ರಮೇಶ್ ಮುಂದಿನ ವರ್ಷ ನಡೆಯಲಿರುವ ಮಾಸ್ಟರ್ಸ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com