ದ್ರಾವಿಡ್ ನೆನೆದ ಪೂಜಾರ

ಫಾರ್ಮ್ ಗೆ ಮರಳಿರುವ ಟೀಂ ಇಂಡಿಯಾ ಬ್ಯಾಟ್ಸ್‍ಮನ್ ಚೇತೇಶ್ವರ ಪೂಜಾರ, ತಮ್ಮ ಈ ಯಶಸ್ಸಿನ ಶ್ರೇಯಸ್ಸನ್ನು ಕೋಚ್ ರಾಹುಲ್ ದ್ರಾವಿಡ್‍ಗೆ ಸಲ್ಲಿಸಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ

ಬೆಂಗಳೂರು: ಈ ವರ್ಷದ ಟೆಸ್ಟ್ ಪಂದ್ಯಗಳಲ್ಲಿ ಮಿಂಚಿನ ಆಟ ಪ್ರದರ್ಶಿಸುವ ಮೂಲಕ ಮತ್ತೆ ಫಾರ್ಮ್ ಗೆ ಮರಳಿರುವ ಟೀಂ ಇಂಡಿಯಾ  ಬ್ಯಾಟ್ಸ್‍ಮನ್ ಚೇತೇಶ್ವರ ಪೂಜಾರ, ತಮ್ಮ ಈ ಯಶಸ್ಸಿನ ಶ್ರೇಯಸ್ಸನ್ನು ಕೋಚ್ ರಾಹುಲ್ ದ್ರಾವಿಡ್‍ಗೆ ಸಲ್ಲಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ, ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಹೊರಹಾಕಲ್ಪಟ್ಟಿದ್ದ ಪೂಜಾರ, ಈ ವರ್ಷ ನಡೆದಿದ್ದ ಶ್ರೀಲಂಕಾ ವಿರುದ್ಧದ ಟೆಸ್ಟ್‍ನಲ್ಲಿ 145 ಹಾಗೂ ಹರಿಣಗಳ ವಿರುದ್ಧದ ಮೊದಲ ಟೆಸ್ಟ್‍ನಲ್ಲಿ 77 ರನ್ ಗಳಿಸಿದ್ದಾರೆ.
ತಮ್ಮ ಆಟದಲ್ಲಿದ್ದ ಕೆಲವು ನ್ಯೂನತೆಗಳ ಬಗ್ಗೆ ದ್ರಾವಿಡ್ ಬಳಿ ಚರ್ಚಿಸಿದ್ದಾಗ ಅವರು ಕೆಲ ಸಲಹೆ ನೀಡಿದ್ದು, ತಾವು ಮರಳಿ ಫಾರ್ಮ್ ಗೆ ಬರಲು ಸಹಾಯಕವಾಯಿತು ಎಂದಿದ್ದಾರೆ ಅವರು. ಪಂಜಾಬ್‍ನ ಉದಯೋನ್ಮುಖ ಆಲ್ರೌಂಡರ್ ಗುರುಕೀರತ್ ಸಿಂಗ್ ಮಾನ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ.
ಶನಿವಾರದಿಂದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಎರಡನೇ ಟೆಸ್ಟ್ ಪಂದ್ಯ ಶುರುವಾಗುವ ಎರಡು ದಿನಗಳ ಮುನ್ನವಷ್ಟೇ ಈ ಬದಲಾವಣೆ ಮಾಡಲಾಗಿದೆ. ಅಂದಹಾಗೆ ಇದೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಮಾನ್, ಯಾವುದೇ ಪಂದ್ಯದಲ್ಲಿ ಅಂತಿಮ ಇಲೆವೆನ್‍ನಲ್ಲಿ ಕಾಣಿಸಿಕೊಂಡಿರಲಿಲ್ಲ. ಪ್ರತಿಷ್ಠಿತ ಫ್ರೀಡಂ ಟ್ರೋಫಿಯ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 108 ರನ್‍ಗಳ ಭರ್ಜರಿ ಜಯ ದಾಖಲಿಸಿದ್ದು, ನಾಲ್ಕು ಪಂದ್ಯಗಳಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com