
ಹೋಸ್ಟನ್: ವಿಕೆಟ್ ಕೀಪರ್ ಕುಮಾರ್ ಸಂಗಕ್ಕಾರ ಸೇರಿದಂತೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಶೇನ್ ವಾರ್ನ್ ವಾರಿಯರ್ಸ್ ತಂಡ, ಸಚಿನ್ ಬ್ಲಾಸ್ಟರ್ಸ್ ವಿರುದ್ಧದ ಆಲ್ ಸ್ಟಾರ್ಸ್ ಕ್ರಿಕೆಟ್ ಲೀಗ್‍ನ ಎರಡನೇ ಪಂದ್ಯವನ್ನು 57 ರನ್‍ಗಳ ಅಂತರದಿಂದ ಗೆದ್ದುಕೊಳ್ಳುವುದರೊಂದಿಗೆ ಸರಣಿಯನ್ನು ಕೈವಶಮಾಡಿಕೊಂಡಿತು.
ಗುರುವಾರ ಬೆಳಗ್ಗೆ ಮಿನಿಟ್ ಮೇಡ್ ಬೇಸ್ ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸಚಿನ್ ಬ್ಲಾಸ್ಟರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲಿಳಿದ ವಾರ್ನ್ ವಾರಿಯರ್ಸ್ ಸ್ಪೋಟಕ ಬ್ಯಾಟಿಂಗ್ ಮೂಲಕ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 262 ರನ್ ಪೇರಿಸಿ ಸಚಿನ್ ಪಡೆಗೆ ಸವಾಲಿನ ಗುರಿ ನೀಡಿತು.
ಇದಕ್ಕೆ ಉತ್ತರವಾಗಿ ಸಚಿನ್ ವಾರಿಯರ್ಸ್ ೨೦ ಓವರ್‍ಗಳಲ್ಲಿ 8 ವಿಕೆಟ್‍ಗೆ 205 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಉಭಯ ತಂಡಗಳು ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರಿಂದ ಪಂದ್ಯದಲ್ಲಿ ಒಟ್ಟಾರೆ 40 ಓವರ್ ಗಳಲ್ಲಿ 467 ರನ್ ದಾಖಲಾಯಿತು. ಈ ಪೈಕಿ ೩೨ ಬೌಂಡರಿ ಹಾಗೂ 38 ಸಿಕ್ಸರ್‍ಗಳು ದಾಖಲಾದವು.
ಸಂಕ್ಷಿಪ್ತ ಸ್ಕೋರ್ ವಾರ್ನ್ ವಾರಿಯರ್ಸ್: 20 ಓವರ್‍ಗಳಲ್ಲಿ 5 ವಿಕೆಟ್‍ಗೆ 262, (ಸಂಗಕ್ಕಾರ 70, ಕಾಲಿಸ್ 45, ಪಾಂಟಿಂಗ್ 41; ಕ್ಲುಸ್ನರ್ 45ಕ್ಕೆ 2)
ಸಚಿನ್ ಬ್ಲಾಸ್ಟರ್ಸ್: 20 ಓವರ್‍ಗಳಲ್ಲಿ ೮ ವಿಕೆಟ್‍ಗೆ 205, (ಪೆÇಲಾಕ್ 55, ಸಚಿನ್ 33, ಕ್ಲುಸ್ನರ್ 22; ಸೈಮಂಡ್ಸ್ 70ಕ್ಕೆ 4, ಸಕ್ಲೇನ್ 12ಕ್ಕೆ 2)
Advertisement