
ಮುಂದಿನ ವರ್ಷ ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಒಪ್ಪಿಗೆ ನೀಡಿದೆ. ಈ ಕುರಿತು ಐಸಿಸಿ ಅಧಿಕೃತ ಹೇಳಿಕೆ ನೀಡಬೇಕಿದ್ದರೂ, ಸಂಸ್ಥೆಯಲ್ಲಿನ ಮೂಲಗಳು ಈ ಟೂರ್ನಿಗೆ ನಿರಾಪೇಕ್ಷಣ ಪತ್ರ ನೀಡಿರುವುದಾಗಿ ತಿಳಿಸಿದೆ. ಮುಂದಿನ ಜನವರಿ 22ರಿಂದ ಟೂರ್ನಿಯನ್ನು ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
6 ತಂಡಗಳಲ್ಲಿ ಒಟ್ಟು 90 ಆಟ-ಗಾರರು ಆಡಲಿದ್ದಾರೆ. ಪ್ರತಿ ತಂಡದಲ್ಲಿ 15 ಆಟ-ಗಾರರು ಭಾಗವಹಿಸಲಿದ್ದಾರೆ. ಈ ಟೂರ್ನಿಗೆ ನವೆಂಬರ್ 27ರಂದು ದುಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ನಿವೃತ್ತಿ ಹೊಂದಿದ ಆಟಗಾರರು
ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ, ಅಬುದಾಬಿ ಶೇಖ್ ಜಾವೇದ್ ಕ್ರೀಡಾಂಗಣ ಮತ್ತು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
Advertisement